ಕುಸ್ತಿಪಟು ಸುಶೀಲ್ ಕುಮಾರ್ ಇನ್ನು ಗ್ರೇಟ್‌ ಖಲಿ ಲೋಕದತ್ತ

Update: 2016-12-30 15:06 GMT

ಹೊಸದಿಲ್ಲಿ,ಡಿ.30: ಭಾರತ ಕುಸ್ತಿಪಟು ಸುಶೀಲ್‌ಕುಮಾರ್ ವರ್ಲ್ಡ್ ರೆಸ್ಲಿಂಗ್(ಡಬ್ಲ್ಯು,ಡಬ್ಲ್ಯು.ಇ) ಎಂಟರ್‌ಟೈನ್‌ಮೆಂಟ್ ಜಗತ್ತಿಗೆ ಕಾಲಿಡುತ್ತಿದ್ದಾರೆ. ಮುಂದಿನ ನವೆಂಬರ್‌ನಿಂದಡಬ್ಲ್ಯು,ಡಬ್ಲ್ಯು.ಇ ಪಾಲ್ಗೊಳ್ಳುತ್ತಿರುವುದಾಗಿ ತಿಳಿಸಿದ್ದು, ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಅವಕಾಶ ಸಿಗದಿರುವುದು ಈ ತೀರ್ಮಾನಕ್ಕೆ ಅವರನ್ನು ಪ್ರೇರೇಪಿಸಿದೆ ಎನ್ನಲಾಗಿದೆ. ಇದರೊಂದಿಗೆ ಗ್ರೇಟ್‌ ಖಲಿ (ದಿಲೀಪ್ ಸಿಂಗ್ ರಾಣಾ) ನಂತರ ರೆಸ್ಲಿಂಗ್ ಜಗತ್ತಿಗೆ ಕಾಲಿಡುತ್ತಿರುವ ಎರಡನೆ ಭಾರತೀಯ ಎನಿಸಿಕೊಳ್ಳುವುದು ಸುಶೀಲ್ ಕುಮಾರ್,  ಕಳೆದ ಅಕ್ಟೋಬರ್‌ನಲ್ಲಿ ಚತ್ರಸ್ ಸ್ಟೇಡಿಯಂನಲ್ಲಿ ರೆಸ್ಲಿಂಗ್ ಪ್ರತಿಭೆ ಅಭಿವೃದ್ಧಿ ವಿಭಾಗದ ಹಿರಿಯ ನಿರ್ದೇಶಕ ಕಾನಿಯನ್ ಸಿಮೋನ್‌ರಲ್ಲಿ ಚರ್ಚೆಸಿದ್ದರೂ ಈಗ ಒಪ್ಪಂದ ಮಾಡಿಕೊಂಡಿದ್ದಾರೆ. ಒಪ್ಪಂದ ಇರುವುದರಿಂದ ಯಾವಾಗ ಬೇಕಿದ್ದರೂ ರೆಸ್ಲಿಂಗ್‌ನಲ್ಲಿ ಭಾಗವಹಿಸುವ ಅವಕಾಶ ಇದೆ.ಆದರೆ ತರಬೇತಿ,ಸ್ಪರ್ಧೆಯ ಪರಿಚಯಕ್ಕಾಗಿ ಅಕ್ಟೋಬರ್‌ವೆರೆಗೆ ಕಾಯಲಾಗುವುದು ಎಂದು ಸುಶೀಲ್ ಕುಮಾರ್ ಏಜೆಂಟ್ ತಿಳಿಸಿದ್ದಾರೆ.

ಭಾರತ ಕಂಡ ಉತ್ಕೃಷ್ಟ ಕುಸ್ತಿಪಟುಗಳಲ್ಲಿ ಸುಶೀಲ್ ಕುಮಾರ್ ಒಬ್ಬರು. ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚು, ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಹಿಂದೆ ಭಾರತದ ಬಾಕ್ಸಿಂಗ್ ಪಟು ವಿಜೇಂದರ್ ಸಿಂಗ್ ವೃತ್ತಿಪರ ಬಾಕ್ಸಿಂಗ್‌ಗೆ ಪಾದಾರ್ಪಣೆ ಮಾಡಿದ್ದನ್ನು ಇಲ್ಲಿಸ್ಮರಿಸಿಕೊಳ್ಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News