ಟಾಕಮ್ ಪಾರಿಯೊ ಅರುಣಾಚಲದ ನೂತನ ಮುಖ್ಯಮಂತ್ರಿ ?
ಇಟಾನಗರ, ಡಿ.30: ಅರುಣಾಚಲಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಆಗರ್ಭ ಶ್ರೀಮಂತ ಎಂಎಲ್‌ಎ ಟಾಕಮ್ ಪಾರಿಯೊ ಅವರ ಆಯ್ಕೆಗೆ ತಯಾರಿ ನಡೆದಿದೆ.
ಪಕ್ಷದ ಶಿಸ್ತನ್ನು ಉಲ್ಲಂಘಸಿದ ಕಾರಣಕ್ಕಾಗಿ ಅರುಣಾಚಲ ಪ್ರದೇಶದ ಮುಖ್ಯ ಮಂತ್ರಿ ಪೇಮ್ ಖಂಡು , ಉಪ ಮುಖ್ಯಮಂತ್ರಿ ಚೌನಾ ಮೆನ್ನಾ ಮತ್ತು ಇತರ ಐವರು ಶಾಸಕರನ್ನು ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ ಪ್ರದೇಶ(ಪಿಪಿಎ) ಇದರ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದ ಬಳಿಕ ಈ ಬೆಳವಣಿಗೆ ಕಂಡು ಬಂದಿದೆ.
ಕಳೆದ ಸೆಪ್ಟಂಬರ್ ನಲ್ಲಿ ಮುಖ್ಯಮಂತ್ರಿ ಖಂಡು ಸೇರಿದಂತೆ ನಲುವತ್ತೆರಡು ಶಾಸಕರು ಕಾಂಗ್ರೆಸ್‌ನಿಂದ ಹೊರಬಂದು ಪಿಪಿಎ ಸೇರಿದ್ದರು. ಇದೀಗ ಮತ್ತೆ ಅರುಣಾಚಲ ಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು ಕಾಣಿಸಿಕೊಂಡಿದೆ.
ಪಿಪಿಎ ಅಧ್ಯಕ್ಷ ಕಫಿಯಾ ಬೆಂಗಿಯಾ ಜಾರಿಗೊಳಿಸಿರುವ ಆದೇಶದಲ್ಲಿ ಖಂಡು ಅವರನ್ನು ಪಿಪಿಎ ಶಾಸಕಾಂಗ ಪಕ್ಷದ ನಾಯಕತ್ವದಿಂದ ಕೆಳಗಿಳಿಸಲಾಗಿದ್ದು, ಅವರು ಕರೆಯುವ ಯಾವುದೇ ಸಭೆಗಳಲ್ಲಿ ಭಾಗವಹಿಸದಂತೆ ಪಿಪಿಎ ಶಾಸಕರಿಗೆ ತಿಳಿಸಲಾಗಿತ್ತು..