×
Ad

ಸೆರೆನಾ ವಿಲಿಯಮ್ಸ್‌ಗೆ ನಿಶ್ಚಿತಾರ್ಥ

Update: 2016-12-30 18:47 IST

ವಾಷಿಂಗ್ಟನ್, ಡಿ.30: ರೆಡಿಟ್ ಸಹ ಸಂಸ್ಥಾಪಕ ಅಲೆಕ್ಸಿಸ್ ಒಹಾನಿಯನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದೇನೆ ಎಂದು ಟೆನಿಸ್ ಸೂಪರ್ ಸ್ಟಾರ್ ಸೆರೆನಾ ವಿಲಿಯಮ್ಸ್ ಗುರುವಾರ ಘೋಷಿಸಿದ್ದಾರೆ. ತನ್ನ ರೆಡಿಟ್ ಖಾತೆಯಲ್ಲಿ ಕವನದ ಮೂಲಕದ ಈ ಸುದ್ದಿಯನ್ನು ಸೆರೆನಾ ಬಹಿರಂಗಪಡಿಸಿದ್ದಾರೆ.

35ರ ಹರೆಯದ ಸೆರೆನಾ ಅವರು 32ರ ಪ್ರಾಯದ ಒಹಾನಿಯನ್‌ರನ್ನು ಶೀಘ್ರವೇ ವಿವಾಹವಾಗಲಿದ್ದಾರೆ.

ವೃತ್ತಿಜೀವನದಲ್ಲಿ ಯಶಸ್ಸಿನ ಶಿಖರವೇರಿರುವ ಸೆರೆನಾರ ಟ್ವಿಟರ್‌ನಲ್ಲಿ ಸೆರೆನಾ ಹಾಗೂ ಭಾವಿ ಪತಿ ಒಹಾನಿಯನ್ ಫೋಟೊ ಹಾಗೂ ಅಭಿನಂದನೆಗಳು ಎಂಬ ಸಂದೇಶ ಹಾಕಲಾಗಿದೆ.

ಸೆರೆನಾ ವಿಲಿಯಮ್ಸ್ ಈ ವರ್ಷ ವಿಂಬಲ್ಡನ್ ಕಿರೀಟವನ್ನು ಧರಿಸುವ ಮೂಲಕ ವೃತ್ತಿಜೀವನದಲ್ಲಿ 71ನೆ ಸಿಂಗಲ್ಸ್ ಪ್ರಶಸ್ತಿಯನ್ನು ಜಯಿಸಿದ್ದರು. ಸತತ 186 ವಾರಗಳ ಕಾಲ ವಿಶ್ವದ ನಂ.1 ಆಟಗಾರ್ತಿಯಾಗಿದ್ದ ಸೆರೆನಾ ಸೆಪ್ಟಂಬರ್‌ನಲ್ಲಿ ಏಂಜೆಲಿಕ್ ಕೆರ್ಬರ್‌ಗೆ ನಂ.1 ಸ್ಥಾನ ಬಿಟ್ಟುಕೊಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News