ಫೆ.3 ರಿಂದ ಪುಣೆಯಲ್ಲಿ ಡೇವಿಸ್ ಕಪ್ ಆರಂಭ
ಹೊಸದಿಲ್ಲಿ, ಡಿ.30: ಭಾರತ ತಂಡ ನ್ಯೂಝಿಲೆಂಡ್‌ನ ವಿರುದ್ಧ ಪುಣೆಯಲ್ಲಿ ಫೆ.3 ರಂದು ಸಂಜೆ ಆರಂಭವಾಗಲಿರುವ ಏಷ್ಯಾ/ಒಶಿಯಾನಿಯ ಗ್ರೂಪ್-1 ಪಂದ್ಯದಲ್ಲಿ ಕಠಿಣ ಸವಾಲು ಎದುರಿಸಲಿದೆ. ಭಾರತ ಡೇವಿಸ್ ಕಪ್‌ನಲ್ಲಿ ಸತತ ಎರಡನೆ ಬಾರಿ ನ್ಯೂಝಿಲೆಂಡ್‌ನ್ನು ಮುಖಾಮುಖಿಯಾಗುತ್ತಿದೆ.
ಟೆನಿಸ್ ಅಭಿಮಾನಿಗಳ ಬೆಂಬಲವನ್ನು ದೃಷ್ಟಿಯಲ್ಲಿಟ್ಟುಕೊಂಡು ಪಂದ್ಯವನ್ನು ಸಂಜೆಯ ವೇಳೆ ನಿಗದಿಪಡಿಸಲಾಗಿದೆ.
ಶುಕ್ರವಾರ ಆರಂಭವಾಗಲಿರುವ ಮೊದಲ ಪಂದ್ಯ ಮಧಾಹ್ನ 3 ಗಂಟೆಗೆ ಹಾಗೂ ಡಬಲ್ಸ್ ಪಂದ್ಯ ಸಂಜೆ 6ಕ್ಕ ಆರಂಭವಾಗುತ್ತದೆ. ರಿವರ್ಸ್ ಸಿಂಗಲ್ಸ್ ರವಿವಾರ ಮತ್ತೊಮ್ಮೆ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ.
ಸ್ಪೇನ್ ವಿರುದ್ಧ ಸೆಪ್ಟಂಬರ್‌ನಲ್ಲಿ ನಡೆದಿದ್ದ ವರ್ಲ್ಡ್ ಗ್ರೂಪ್ ಪ್ಲೇ-ಆಫ್ ಪಂದ್ಯಗಳು ಸಂಜೆ 5 ಗಂಟೆಗೆ ಹಾಗೂ ಡಬಲ್ಸ್ ಪಂದ್ಯಗಳು ಸಂಜೆ 7ಕ್ಕೆ ಡಿಎಲ್‌ಟಿಎನಲ್ಲಿ ನಡೆದಿದ್ದವು.
ಪಂದ್ಯದ ಸಮಯಕ್ಕೆ ಸಂಬಂಧಿಸಿ ಎಐಟಿಎ ಆಟಗಾರರನ್ನು ಸಂಪರ್ಕಿಸಿದೆ. ನಾಯಕ ಆನಂದ್ ಅಮೃತ್‌ರಾಜ್‌ರನ್ನು ಈ ಬಗ್ಗೆ ಸಂಪರ್ಕಿಸಿಲ್ಲ. ಆ ಸಮಯಕ್ಕೆ ಅಮೃತ್‌ರಾಜ್ ಅಲ್ಲಿರುವ ಬಗ್ಗೆ ಎಐಟಿಎಗೆ ಖಚಿತತೆಯಿಲ್ಲ.