ಮಂಗಳೂರು: ವಿಮಾನಗಳ ಹಾರಾಟದಲ್ಲಿ ಭಾರೀ ವ್ಯತ್ಯಯ

Update: 2016-12-31 10:21 GMT

ಮಂಗಳೂರು, ಡಿ.31: ಹವಾಮಾನ ವೈಪರಿತ್ಯದಿಂದಾಗಿ ಮಂಗಳೂರು ವಿಮಾನ ನಿಲ್ದಾಣದಿಂದ ಹೊರಡಬೇಕಾಗಿದ್ದ ಮೂರ್ನಾಲ್ಕು ವಿಮಾನಗಳು ಶುಕ್ರವಾರ ಸಂಜೆಯಿಂದ ತಡವಾಗಿ ಯಾನ ನಡೆಸುತ್ತಿವೆ.

ಶುಕ್ರವಾರ ಸಂಜೆಯಿಂದ ಕನಿಷ್ಠ 2-3 ಗಂಟೆಗಳ ಕಾಲದ ವ್ಯತ್ಯಯದಲ್ಲಿ ವಿಮಾನ ಹಾರಾಟ ನಡೆಸುತ್ತಿವೆ. ದಟ್ಟ ಮಂಜಿನಿಂದಾಗಿ ಏರ್‌ಇಂಡಿಯಾ, ಜೆಟ್ ಏರ್‌ವೇಸ್‌ನ ವಿಮಾನಗಳ ಯಾನಕ್ಕೆ ತೊಂದರೆಯಾಗಿದೆ. ಶನಿವಾರ ಬೆಳಗ್ಗೆ 8:30ಕ್ಕೆ ಹೊರಡಬೇಕಾಗಿದ್ದ ಜೆಟ್‌ ಏರ್‌ವೇಸ್‌ನ ವಿಮಾನ ಮಧ್ಯಾಹ್ನ 1 ಗಂಟೆಯವರೆಗೂ ಹಾರಾಟ ನಡೆಸಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ರಾಧಾಕೃಷ್ಣ, ‘ಹವಾಮಾನದ ಸಮಸ್ಯೆಯಿಂದ ಓಡಾಟದಲ್ಲಿ ವಿಳಂಬವಾಗಿದೆ. ಇದರಿಂದ ಹಲವು ಪ್ರಯಾಣಿಕರಿಗೆ ನಿಗದಿತ ಸಮಯಕ್ಕೆ ಉದ್ದೇಶಿಸಿತ ಸ್ಥಳಕ್ಕೆ ತಲುಪಲು ಸಾಧ್ಯವಾಗಿಲ್ಲ, ನಿಜ. ಆದರೆ, ವಿಮಾನ ಓಡಾಟವನ್ನು ನಿಲ್ಲಿಸಿಲ್ಲ’ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News