ಸಹೋದರರ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ

Update: 2017-01-01 18:58 GMT

ಕಾಸರಗೋಡು, ಜ.1: ಕೊಳವೆಬಾವಿ ಕೊರೆಯುವ ವಿವಾದಕ್ಕೆ ಸಂಬಂಧಪಟ್ಟಂತೆ ಸಹೋದರರ ನಡುವೆ ಜಗಳ ನಡೆದು ಇರಿತದಿಂದ ಓರ್ವ ಮೃತಪಟ್ಟು, ಪತ್ನಿ ಪುತ್ರ ಸೇರಿದಂತೆ ಮೂವರು ಗಾಯಗೊಂಡ ಘಟನೆ ಶನಿವಾರ ತಡರಾತ್ರಿ ಹೊಸದುರ್ಗ ಠಾಣಾ ವ್ಯಾಪ್ತಿಯ ರಾವಣೇಶ್ವರದಲ್ಲಿ ನಡೆದಿದೆ.

  ಮೃತಪಟ್ಟವರನ್ನು ರಾವಣೇಶ್ವರ ಪಾಡಿಕಾನಂನ ಕುಮಾರನ್(50) ಎಂದು ಗುರುತಿಸಲಾಗಿದೆ.

  ಅವರ ಪತ್ನಿ ವತ್ಸಲಾ(40), ಪುತ್ರ ಪ್ರಸಾದ್(24) ಮತ್ತು ಸಹೋದರ ಪದ್ಮನಾಭನ್(54) ಗಾಯ ಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ವತ್ಸಲಾ ಮತ್ತು ಪ್ರಸಾದ್‌ರನ್ನು ಮಂಗಳೂರು ಆಸ್ಪತ್ರೆಗೆ ದಾಖ ಲಿಸಲಾಗಿದೆ. ಪದ್ಮನಾಭನ್‌ರನ್ನು ಜಿಲ್ಲಾ ಸರಕಾರಿ ಆಸ್ಪತ್ರೆ ಯಲ್ಲಿ ದಾಖಲಿಸಲಾಗಿದೆ. ಕೊಲೆಗೈಯ್ಯಲ್ಪಟ್ಟ ಕುಮಾರನ್‌ಹಿತ್ತಿಲಲ್ಲಿ ಕೊಳವೆ ಬಾವಿ ನಿರ್ಮಿಸಲು ತೀರ್ಮಾನಿಸಿದ್ದು, ಅದರಂತೆ ಅವರು ಶನಿವಾರ ಬೆಳಗ್ಗೆ ಅದರ ಸಿದ್ಧತೆಯಲ್ಲಿ ತೊಡ ಗಿದ್ದರು ಎಂದು ತಿಳಿದು ಬಂದಿದೆ. ಆದರೆ ಪಕ್ಕ ದಲ್ಲೇ ವಾಸಿಸುತ್ತಿರುವ ಅವರು ಸಹೋದರರು ವಿರೋಸಿದ್ದು, ಪರಸ್ಪರ ತೀವ್ರ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಅಲ್ಲದೆ ಕೊಳವೆ ಬಾವಿ ನಿರ್ಮಾಣವನ್ನು ವಿರೋಸಿದ ಸಹೋದರರು ಆ ಬಗ್ಗೆ ಹೊಸದುರ್ಗ ಪೊಲೀಸರಿಗೂ ದೂರು ನೀಡಿದ್ದರು. ಅದರಂತೆ ಪೊಲೀಸರು ಎರಡು ಕಡೆಯವರನ್ನು ಠಾಣೆಗೆ ಕರೆಸಿ ಚರ್ಚೆ ನಡೆಸಿ, ವಿವಾದ ಮುಗಿಯುವ ತನಕ ಕೊಳವೆ ಬಾವಿ ನಿರ್ಮಾಣದಲ್ಲಿ ತೊಡಗದಂತೆ ಕುಮಾರನ್‌ರಿಗೆ ಆದೇಶಿಸಿದ್ದರು ಎಂದು ತಿಳಿದು ಬಂದಿದೆ.

ಆದರೆ ಶನಿವಾರ ರಾತ್ರಿ 11:30ರ ಸುಮಾರಿಗೆ ಕುಮಾರನ್ ಹಿತ್ತಿಲಲ್ಲಿ ಕೊಳವೆಬಾವಿ ತೋಡುವ ವಾಹನ ಬಂದು ಕೆಲಸದಲ್ಲಿ ತೊಡಗಿದಾಗ ಅವರ ಸಹೋದರರು ಬಂದು ತಡೆದಿದ್ದಾರೆ ಎನ್ನಲಾಗಿದೆ. ಆಗ ಪರಸ್ಪರ ವಾಗ್ವಾದ ಉಂಟಾಗಿ ಅದು ಘರ್ಷಣೆಯತ್ತ ತಿರುಗಿ ಕುಮಾರನ್‌ಗೆ ಚೂರಿಯಿಂದ ಇರಿದಿದ್ದು ತಡೆಯಲು ಬಂದ ಪತ್ನಿ , ಪುತ್ರನ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಪಟ್ಟಂತೆ ಹೊಸದುರ್ಗ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News