×
Ad

ಮಿಲಿಟರಿಯಲ್ಲಿ ಉನ್ನತ ಸ್ಥಾನ ಪಡೆದ ಮಲಯಾಳಿ

Update: 2017-01-02 11:17 IST

ಭಾರತೀಯ ಮೂಲಕ ಸೌದಿ ಉದ್ಯಮಿ ಕಿರ್ಗಿಸ್ತಾನ್ ರಕ್ಷಣಾ ಇಲಾಖೆಯಲ್ಲಿ ಹಿರಿಯ ಹುದ್ದೆಗೆ ನೇಮಕಗೊಂಡಿದ್ದಾರೆ. ಕೇರಳ ಮೂಲದ ಶೇಖ್ ರಫೀಕ್ ಮುಹಮ್ಮದ್ ಅವರನ್ನು ಕಿರ್ಗಿಸ್ತಾನ್ ರಕ್ಷಣಾ ಸಚಿವ ಮೇಝರ್ ಜನರಲ್ ಆಗಿ ನೇಮಿಸಿರುವುದಾಗಿ ಕಿರ್ಜಿಸ್ತಾನದ ಅಧಿಕೃತ ಪ್ರಕಟನೆ ಅಲಿ ಮಿರ್ಜಾ ತಿಳಿಸಿದೆ.

ಕೇರಳದ ವ್ಯಕ್ತಿಯೊಬ್ಬರು ವಿದೇಶದಲ್ಲಿ ದೊಡ್ಡ ಮಟ್ಟದಲ್ಲಿ ಸೇನಾ ನಾಯಕತ್ವವನ್ನು ವಹಿಸಿಕೊಂಡಿರುವುದು ಇದೇ ಮೊದಲ ಬಾರಿಯಾಗಿದೆ. ಅನಿವಾಸಿ ಕೇರಳದ ವ್ಯಕ್ತಿ ಪಡೆದ ಅಪರೂಪದ ಸೇನಾ ಸ್ಥಾನವಿದು ಎಂದು ರಫೀಕ್‌ರ ಮಾಧ್ಯಮ ಸಲಹೆಗಾರ ಓಮರ್ ಅಬುಬಕರ್ ಹೇಳಿದ್ದಾರೆ.

ಕಿರ್ಜಿಸ್ತಾನ ಪೌರತ್ವ ಹೊಂದಿರುವ ರಫೀಕ್  ಹಿಂದೆ ಮಾಜಿ ಅಧ್ಯಕ್ಷ ಕುರ್ಮನ್ಬೆಕ್ ಸಲಿಯೇವಿಚ್ ಬಾಕಿಯೇವ್ ಅವರಿಗೆ ಸಲಹೆಗಾರರಾಗಿ 2005 ರಿಂದ 2010ರವರೆಗೆ ಕಾರ್ಯ ನಿರ್ವಹಿಸಿದ್ದರು. ರಫೀಕ್ ಮತ್ತು ಸಲಿಯೇವಿಚ್ ಇರಾನ್‌ನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು. ರಫೀಕ್ ಪ್ರಮುಖ ಸ್ಟೀಲ್ ಘಟಕವೊಂದನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇರಾನ್‌ನಲ್ಲಿದ್ದರು.

ಆರ್ಥಿಕ ರಾಜತಾಂತ್ರಿಕರಾಗಿ ರಫೀಕ್, ಹಲವು ದೇಶಗಳಿಗೆ ಭೇಟಿ ನೀಡಿ ಕರ್ಜಿಸ್ತಾನಕ್ಕೆ ವಿದೇಶಿ ಹೂಡಿಕೆಗಳನ್ನು ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈವರೆಗೆ ವಿದೇಶಿ ಹೂಡಿಕೆದಾರರನ್ನು ದೂರವಿರಿಸಿದ್ದ ಕೆಲವು ತೆರಿಗೆ ನಿಯಮಗಳನ್ನು ಸರಳಗೊಳಿಸುವಲ್ಲೂ ಅವರ ಪಾತ್ರ ಪ್ರಮುಖವಾಗಿತ್ತು.

ಚಿಕ್ಕ ವಯಸ್ಸಿನಲ್ಲಿಯೇ ಕೇರಳ ತೊರೆದಿದ್ದ ರಫೀಕ್ ತಮ್ಮ ಪ್ರಾಥಮಿಕ ಶಿಕ್ಷಣ ಮಾತ್ರ ಪೂರೈಸಿದ್ದರು. ಮುಂಬೈಗೆ ಹೋಗಿ ಉದ್ಯಮದ ತಂತ್ರಗಳನ್ನು ಕಲಿತು ನಂತರ ಮಧ್ಯಪ್ರಾಚ್ಯಕ್ಕೆ ತೆರಳಿದ್ದರು. ನಂತರ ಯುಎಇ, ಇರಾನ್, ಸೌದಿ ಅರೆಬಿಯಾ ಮತ್ತು ಕಿರ್ಗಿಸ್ತಾನ್ಗಳಲ್ಲಿ ಕೆಲಸ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News