ಭಾರತದ ಮಾಜಿ ಫುಟ್ಬಾಲ್ ಆಟಗಾರ ಸಿ.ಎಂ. ಚಿದಾನಂದನ್ ನಿಧನ
ಕಣ್ಣೂರ್,ಜ.2: ಪ್ರಮುಖ ಫುಟ್‌ಬಾಲ್ ಆಟಗಾರ ಕೇರಳದ ಸಂತೋಷ್ ಟ್ರೋಫಿಯ ಮಾಜಿ ನಾಯಕ ತಾಳೀಕ್ಕಾವ್ ಸಿ.ಎಂ. ಚಿದಾನಂದನ್ ಅಮೆರಿಕದಲ್ಲಿ ನಿಧನರಾದರು. ಅವರಿಗೆ ಎಪ್ಪತ್ತಾರು ವರ್ಷ ವಯಸ್ಸಾಗಿತ್ತು. ಚೆನ್ನೈ ನಿವಾಸಿಯಾಗಿದ್ದ ಅವರು ತಮ್ಮ ಮಕ್ಕಳೊಂದಿಗೆ ವಾಸಿಸುವ ಸಲುವಾಗಿ ಇತ್ತೀಚೆಗೆ ಅಮೆರಿಕದ ವರ್ಜೀನಿಯಕ್ಕೆ ಹೋಗಿದ್ದರು. ಇಂದು ಎಂಆರ್‌ಸಿ ವೆಲ್ಲಿಂಗ್ಟನ್ ಸೇಟ್ ನಾಗ್ಜಿ ಟ್ರೋಫಿ ಗೆದ್ದಿದ್ದ ಕೇರಳ ತಂಡಕ್ಕೆ ನಾಯಕನಾಗಿದ್ದರು.
ಕಣ್ಣೂರ್ ಬ್ರದರ್ಸ್ ಕ್ಲಬ್‌ನಲ್ಲಿ ಆಟವಾಡಲು ಆರಂಭಿಸಿದ ಚಿದಾನಂದನ್ ಆಕಾಲದ ಉತ್ಕೃಷ್ಟ ಫಾರ್ವರ್ಡ್ ಆಟಗಾರ ಆಗಿದ್ದಾರೆ. 1962-63 ರಲ್ಲಿ ಕಣ್ಣೂರ್ ಜಿಲ್ಲಾ ಲೀಗ್ ಫುಟ್‌ಬಾಲ್ ಚಾಂಪಿಯನ್ ಶಿಪ್‌ನಲ್ಲಿ ಬ್ರದರ್ಸ್ ತಂಡದ ಪ್ರಧಾನ ಆಟಗಾರ ಆಗಿದ್ದರು. 1961ರಲ್ಲಿ ರಾಷ್ಟ್ರೀಯ ಫುಟ್ಬಾಲ್ ಪಂದ್ಯಾಟದಲ್ಲಿ ಸಂಪಂಗಿ ಟ್ರೋಫಿ ವಿಜಯಿಯಾದ ತಂಡದಲ್ಲಿ ಅವರಿದ್ದರು. ಬ್ರದರ್ಸ್ ಕ್ಲಬ್, ಮೋಹನ್ ಬಾಗನ್, ಸರ್ವೀಸಸ್, ಎಂಆರ್‌ಸಿ ವೆಲ್ಲಿಂಗ್ಟನ್ ಕ್ಲಬ್‌ಗಳಿಗೂ ಅವರು ಆಡಿದ್ದಾರೆ. ಕೊನೆಯದಾಗಿ ಮದ್ರಾಸ್ ರೆಜಿಮೆಂಟ್ ಕ್ಲಬ್‌ಗೆ ಆಡಿದ್ದರು.
ಫುಟ್‌ಬಾಲ್‌ನಿಂದ ನಿವೃತ್ತರಾದ ಬಳಿಕ ಇಪ್ಪತ್ತು ವರ್ಷ ಅವರು ಗಲ್ಫ್‌ನಲ್ಲಿದ್ದರು. ನಂತರ ಅಲ್ಲಿಂದ ಚೆನ್ನೈಗೆ ವಾಸ ಬದಲಿಸಿದ್ದರು. ಪ್ರಮುಖ ಫುಟ್‌ಬಾಲ್ ಆಟಗಾರ ಸಿ.ಎಂ. ತೀರ್ಥಾನಂದನ್, ಕೇರಳ ರಣಜಿ ತಂಡದ ಮಾಜಿ ನಾಯಕ ಸಿ.ಎಂ. ಅಶೋಕ್ ಶೇಖರ್ ಚಿದಾನಂದನ್ ರ ಸಹೋದರರು ಎಂದು ವರದಿ ತಿಳಿಸಿದೆ.