ಸೆಲ್ಫಿ ಗೀಳಿಗೆ ‘ಚಿಕಿತ್ಸೆ ನೀಡಿದ’ ಮೊಸಳೆ
Update: 2017-01-02 12:24 IST
ಬ್ಯಾಂಕಾಕ್,ಜ.2: ಸೆಲ್ಫಿ ತೆಗೆಯುತ್ತಿದ್ದ ವೇಳೆ ಫ್ರೆಂಚ್ ಪ್ರವಾಸಿ ಮಹಿಳೆಗೆ ಮೊಸಳೆ ಕಚ್ಚಿದ ಅಪರೂಪದ ಘಟನೆ ಥಾಯ್ಲೆಂಡ್ ಖೊಯಾಯ್ ರಾಷ್ಟ್ರೀಯ ಪಾರ್ಕ್‌ನಲ್ಲಿ ನಡೆದಿದೆ. ಪತಿಯೊಂದಿಗೆ ಮೊಸಳೆಯನ್ನು ಹಿನ್ನೆಲೆಯಾಗಿಟ್ಟು ಸೆಲ್ಫಿ ತೆಗೆಯುತ್ತಿದ್ದ 44 ವರ್ಷದ ಮಹಿಳೆಗೆ ಕೊಳದಲ್ಲಿದ್ದ ಇನ್ನೊಂದು ಮೊಸಳೆ ಕಚ್ಚಿದೆ.
ಕಾಲಿಗೆ ಗಾಯವಾದ ಮಹಿಳೆಯನ್ನು ಭದ್ರತಾ ಗಾರ್ಡ್‌ಗಳು ರಕ್ಷಿಸಿದ್ದಾರೆ. ಕೂಡಲೆ ಹತ್ತಿರದ ಆಸ್ಪತ್ರೆಗೆ ತಲುಪಿಸಲಾಗಿದ್ದು ಮಹಿಳೆಗೆ ಗಂಭೀರ ಗಾಯವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮೊಸಳೆಯ ಹಲ್ಲು ಮಹಿಳೆಯ ಕಾಲಿಗೆ ಆಳಗಾಯ ಮಾಡಿದೆ. ಮೊಸಳೆಗಳ ಕುರಿತು ಎಚ್ಚರಿಕೆಯ ಬೋರ್ಡ್ ಹಾಕಲಾಗಿದ್ದರೂ ಮಹಿಳೆ ಅದನ್ನು ಕಡೆಗಣಿಸಿದ್ದರು ಎಂದು ಪಾರ್ಕ್‌ನ ಅಧಿಕಾರಿಗಳು ಹೇಳಿದ್ದಾರೆಂದು ವರದಿಯಾಗಿದೆ.