×
Ad

ಎಂಟಿ ವಾಸುದೇವನ್ ನಾಯರ್‌ನ್ನು ವಿರೋಧಿಸುವ ಸಂಘಪರಿವಾರದ ಆಸೆ ಕೈಗೂಡದು: ವಿಎಸ್ ಅಚ್ಯುತಾನಂದನ್

Update: 2017-01-02 14:33 IST

ಆಲಪ್ಪುಝ,ಜ.2: ಎಂಎಂ ಕಲಬುರ್ಗಿ, ಗೋವಿಂದ ಫನ್ಸಾರೆಯನ್ನು ಮುಗಿಸಿದ ರೀತಿಯಲ್ಲಿ ಜ್ಞಾನಪೀಠ ವಿಜೇತ ಎಂ.ಟಿ.ವಾಸುದೇವನ್ ನಾಯರ್‌ರನ್ನು ಎದುರಿಸಬಹುದೆಂಬ ಸಂಘಪರಿವಾರದ ವ್ಯಾಮೋಹ ನಡೆಯದು ಎಂದು ವಿ.ಎಸ್. ಅಚ್ಯುತಾನಂದನ್ ಹೇಳಿದ್ದಾರೆ. ಆಲಪ್ಪುಝ ಪುನ್ನಮಡ ’ದೃಶ್ಯ ಕಲಾ ಕ್ರೀಡಾ ವೇದಿಕೆ’ಯ 25ನೆ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತಾಡುತ್ತಿದ್ದರು.

ಎಂಟಿ ವಾಸುದೇವನ್ ನಾಯರ್ ವಿರುದ್ಧ ಖಡ್ಗ ಝಳಪಿಸುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಇಂತಹ ಪ್ರಯತ್ನಗಳನ್ನು ವಿರೋಧಿಸಿ ಸೋಲಿಸಲು ಎಡಪಕ್ಷ-ಪ್ರಗತಿಪರ ಶಕ್ತಿಗಳಲ್ಲಿ ಸಾಮರ್ಥ್ಯವಿದೆ. ಸಂಘಪರಿವಾರ ಸಮಾಜದ ಎಲ್ಲ ಕ್ಷೇತ್ರದೊಳಗೆ ನುಸುಳಲು ಯತ್ನಿಸುತ್ತಿದೆ. ಇದು ನಾಡಿನ ಶಾಂತಿಗೆ ಮಾರಕವಾಗಲಿದೆ. ಎಷ್ಟೇ ಪ್ರಯತ್ನಿಸಿದರೂ ಕೇರಳದಲ್ಲಿ ಗಟ್ಟಿಯಾಗಲು ವಿಫಲವಾದದ್ದರ ರಾಜಕೀಯ ದ್ವೇಷ ಮೋದಿಗೂ ಬಿಜೆಪಿಗೂ ಇದೆ.

ಆದ್ದರಿಂದಲೇ ರಾಜ್ಯದ ಸಹಕಾರಿ ಕ್ಷೇತ್ರಕ್ಕೆ ಹೊಂಡ ತೋಡಲು ಶ್ರಮಿಸುತ್ತಿದ್ದಾರೆ. ಪ್ರಧಾನಮಂತ್ರಿ ಹೇಳಿದ ಜನಧನ್ ಖಾತೆಗೆ ಕಪ್ಪುಹಣವಿರುವವರು ಹಣ ಹಾಕುತ್ತಿದ್ದಾರೆ. ಕಪ್ಪು ಹಣವನ್ನು ಪತ್ತೆ ಹಚ್ಚುವ ಬದಲು ಅಂತಹವರ ಸಾವಿರಾರು ಕೋಟಿ ರೂ. ಸಾಲವನ್ನು ಮನ್ನಾ ಮಾಡಲಾಗಿದೆ ಎಂದು ವಿಎಸ್ ಅಚ್ಯುತಾನಂದನ್ ಹೇಳಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News