×
Ad

ದ್ವಿತೀಯ ಟೆಸ್ಟ್: ಉತ್ತಮ ಮೊತ್ತದತ್ತ ದ.ಆಫ್ರಿಕ

Update: 2017-01-02 22:59 IST

ಕೇಪ್‌ಟೌನ್,ಜ.2: ಆರಂಭಿಕ ಬ್ಯಾಟ್ಸ್‌ಮನ್ ಎಲ್ಗರ್ ಶತಕದ ನೆರವಿನಿಂದ ದಕ್ಷಿಣ ಆಫ್ರಿಕ ತಂಡ ಶ್ರೀಲಂಕಾ ವಿರುದ್ಧ ಸೋಮವಾರ ಇಲ್ಲಿ ಆರಂಭವಾದ ಎರಡನೆ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತದತ್ತ ಚಿತ್ತವಿರಿಸಿದೆ.

 ನ್ಯೂಲ್ಯಾಂಡ್ಸ್ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಶ್ರೀಲಂಕಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಆಫ್ರಿಕ ಮೊದಲ ಓವರ್‌ನ 4ನೆ ಎಸೆತದಲ್ಲಿ ಆರಂಭಿಕ ಆಟಗಾರ ಸ್ಟೀಫನ್ ಕುಕ್ ವಿಕೆಟ್‌ನ್ನು ಕಳೆದುಕೊಂಡಿತು.

ಆಗ 2ನೆ ವಿಕೆಟ್‌ಗೆ ಅಮ್ಲರೊಂದಿಗೆ 66 ರನ್ ಜೊತೆಯಾಟ ನಡೆಸಿದ ಎಲ್ಗರ್(129 ರನ್, 230 ಎಸೆತ, 15 ಬೌಂಡರಿ) ತಂಡವನ್ನು ಆಧರಿಸಿದರು. ಆ ಬಳಿಕ ಎಲ್ಗರ್ ಅವರು ನಾಯಕ ಎಫ್‌ಡು ಪ್ಲೆಸಿಸ್‌ರೊಂದಿಗೆ 4ನೆ ವಿಕೆಟ್‌ಗೆ 76 ರನ್ ಸೇರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.

6ನೆ ವಿಕೆಟ್‌ಗೆ ವಿಕೆಟ್‌ಕೀಪರ್ ಕ್ವಿಂಟನ್ ಡಿಕಾಕ್‌ರೊಂದಿಗೆ 103 ರನ್ ಸೇರಿಸಿದ ಎಲ್ಗರ್ ಆಫ್ರಿಕದ ಸ್ಕೋರನ್ನು 272 ರನ್‌ಗೆ ತಲುಪಿಸಿದರು. ಎಲ್ಗರ್ 85ನೆ ಓವರ್‌ನಲ್ಲಿ ಲಕ್ಮಲ್‌ಗೆ ವಿಕೆಟ್ ಒಪ್ಪಿಸಿದರು.

ಎಲ್ಗರ್ ಔಟಾದ ಬಳಿಕ ತಂಡವನ್ನು ಆಧರಿಸಿದ ಡಿಕಾಕ್(ಅಜೇಯ 68, 90 ಎಸೆತ, 7 ಬೌಂಡರಿ) ಆಲ್‌ರೌಂಡರ್ ಅಬಾಟ್(16)ರೊಂದಿಗೆ 7ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 25 ರನ್ ಸೇರಿಸಿದ್ದಾರೆ.

ಸಂಕ್ಷಿಪ್ತ ಸ್ಕೋರ್

ದಕ್ಷಿಣ ಆಫ್ರಿಕ 90 ಓವರ್‌ಗಳಲ್ಲಿ 284/6

(ಎಲ್ಗರ್ 129 ರನ್, ಡಿಕಾಕ್ ಅಜೇಯ 68, ಕುಮಾರ್ 3-86, ಲಕ್ಮಲ್ 2-69)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News