×
Ad

ನೋಟು ರದ್ದತಿ ಎಫೆಕ್ಟ್ : ಇನ್ನೂ ಚೇತರಿಸಿಕೊಳ್ಳದ ದ್ವಿಚಕ್ರ ವಾಹನಗಳ ಮಾರಾಟ

Update: 2017-01-03 20:05 IST

ಹೊಸದಿಲ್ಲಿ,ಜ.3: ನೋಟು ರದ್ದತಿಯ ಬಳಿಕ ದ್ವಿಚಕ್ರ ವಾಹನಗಳ, ವಿಶೇಷವಾಗಿ ಬೈಕ್‌ಗಳ ಮಾರಾಟದಲ್ಲಿ ಕುಸಿತವುಂಟಾಗಿದ್ದು, 55 ದಿನಗಳು ಕಳೆದರೂ ಇನ್ನೂ ಚೇತರಿಸಿಕೊಂಡಿಲ್ಲ. ವಹಿವಾಟುಗಳಿಗೆ ನಗದು ಹಣವನ್ನೇ ಅವಲಂಬಿಸಿರುವ ಗ್ರಾಮೀಣ ಮಾರುಕಟ್ಟೆ ತಳ ಕಂಡಿರುವುದು ಇದಕ್ಕೆ ಕಾರಣವಾಗಿದೆ.

ಹಿರೋ ಮೋಟೊಕಾರ್ಪ್, ಬಜಾಜ್ ಆಟೊ ಮತ್ತು ಟಿವಿಎಸ್ ಮೋಟರ್ ಕಂಪನಿ ಸೇರಿದಂತೆ ಪ್ರಮುಖ ದ್ವಿಚಕ್ರ ವಾಹನ ತಯಾರಿಕೆ ಕಂಪನಿಗಳು ಡಿಸೆಂಬರ್‌ನಲ್ಲಿ ಕಡಿಮೆ ಮಾರಾಟವನ್ನು ವರದಿ ಮಾಡಿವೆ. ನವೆಂಬರ್‌ನಲ್ಲಿ ಕಂಡುಬಂದಿದ್ದ ಕುಸಿತ ಡಿಸೆಂಬರ್‌ನಲ್ಲಿಯೂ ಮುಂದುವರಿದಿದ್ದು, ಮಾರಾಟ ಯಥಾಸ್ಥಿತಿಗೆ ಮರಳಲು ಕನಿಷ್ಠ 2-3 ತಿಂಗಳುಗಳಾದರೂ ಬೇಕು ಎನ್ನುವುದು ವಾಹನ ತಯಾರಿಕೆ ಕ್ಷೇತ್ರದ ಪ್ರಮುಖರ ಅಭಿಪ್ರಾಯವಾಗಿದೆ.

ಗ್ರಾಮೀಣ ಮಾರುಕಟ್ಟೆಯಲ್ಲಿ ಅರ್ಧದಷ್ಟು ಬೈಕ್‌ಗಳು ಮಾರಾಟವಾಗುತ್ತವೆ. ಇದೇ ವೇಳೆ ನಗರ ಕೇಂದ್ರಿತ ಸ್ಕೂಟರ್‌ಗಳ ಮಾರಾಟ ಪ್ರಮಾಣದಲ್ಲಿಯೂ ಇಳಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News