ಬಿಸಿಸಿಐಗೆ ಆಡಳಿತಾಧಿಕಾರಿ ಹೆಸರು ಪ್ರಸ್ತಾವ ಪ್ರಕ್ರಿಯೆ : ನಾರಿಮನ್ ಸ್ಥಾನಕ್ಕೆ ಅನಿಲ್ ದಿವಾನ್ ನೇಮಿಸಿದ ಸುಪ್ರೀಂ

Update: 2017-01-03 14:36 GMT

ಹೊಸದಿಲ್ಲಿ, ಜ.3: ಬಿಸಿಸಿಐಗೆ ಹೊಸ ಆಡಳಿತಾಧಿಕಾರಿಯ ಹೆಸರನ್ನು ಶಿಫಾರಸು ಮಾಡಲು ತನ್ನಿಂದ ಸಾಧ್ಯವಾಗದು ಎಂದು ತಿಳಿಸಿರುವ ಕಾರಣ ಖ್ಯಾತ ವಕೀಲ ಎಫ್.ಎಸ್.ನಾರಿಮನ್ ಅವರ ಸ್ಥಾನದಲ್ಲಿ ಅನಿಲ್ ದಿವಾನ್ ಅವರನ್ನು ನೇಮಿಸಿದೆ.

  2009ರಲ್ಲಿ ಓರ್ವ ವಕೀಲನಾಗಿ ಕ್ರಿಕೆಟ್ ಮಂಡಳಿಯನ್ನು ಪ್ರತಿನಿಧಿಸಿರುವ ಕಾರಣ ಈ ಪ್ರಕ್ರಿಯೆಯ ಭಾಗವಾಗಿರಲು ತಾನು ಇಚ್ಛಿಸುವುದಿಲ್ಲ ಎಂದು ನಾರಿಮನ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕುರ್ ನೇತೃತ್ವದ ಪೀಠಕ್ಕೆ ತಿಳಿಸಿದರು.

   ಈ ಹಿನ್ನೆಲೆಯಲ್ಲಿ, ಸುಪ್ರೀಂಕೋರ್ಟ್‌ಗೆ ಸಹಕಾರ ನೀಡುತ್ತಿರುವ ಹಿರಿಯ ವಕೀಲ ಗೋಪಾಲ್ ಸುಬ್ರಮಣಿಯಂ ಅವರೊಂದಿಗೆ ಕಾರ್ಯ ನಿರ್ವಹಿಸುವಂತೆ ಮತ್ತು ಬಿಸಿಸಿಐ ಆಡಳಿತ ನಿರ್ವಹಿಸಲು ಸೂಕ್ತ ವ್ಯಕ್ತಿಯ ಹೆಸರು ಸೂಚಿಸುವಂತೆ ಪೀಠವು ಅನಿಲ್ ದಿವಾನ್‌ಗೆ ಸೂಚಿಸಿತು. ಎರಡು ವಾರದೊಳಗೆ ಸಂಭಾವ್ಯ ಆಡಳಿತಗಾರನ ಹೆಸರನ್ನು ಸೂಚಿಸುವಂತೆ ಕೋರ್ಟ್ ಇಬ್ಬರು ವಕೀಲರಿಗೂ ತಿಳಿಸಿತು. ಸೋಮವಾರ ಸುಪ್ರೀಂಕೋರ್ಟ್ ಅನುರಾಗ್ ಠಾಕುರ್ ಮತ್ತು ಅಜಯ್ ಶಿರ್ಕೆ ಅವರನ್ನು ಕ್ರಮವಾಗಿ ಬಿಸಿಸಿಐ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕುವಂತೆ ಆದೇಶ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News