ಬ್ರಿಟನ್‌ನ 2017ರ ಮೊದಲ ಮಗು ಭಾರತೀಯ ಮೂಲದ್ದು
Update: 2017-01-03 20:29 IST
ಲಂಡನ್, ಜ. 3: ಬ್ರಿಟನ್‌ನ 2017ರ ಮೊದಲ ಮಗು ಭಾರತೀಯ ಮೂಲದ್ದು. ಹೊಸ ವರ್ಷ ಆರಂಭವಾದ ಒಂದೇ ನಿಮಿಷದಲ್ಲಿ, ಅಂದರೆ, ಜನವರಿ 1ರ ಮುಂಜಾನೆ 12.01ಕ್ಕೆ ಮಗು ಜನಿಸಿದೆ.
ಭಾರತೀಯ ಮೂಲದ ಭಾರತಿ ದೇವಿ ಬರ್ಮಿಂಗ್‌ಹ್ಯಾಮ್‌ನ ಸಿಟಿ ಆಸ್ಪತ್ರೆಯಲ್ಲಿ ಮಗುವಿಗ ಜನ್ಮ ನೀಡಿದರು.
‘‘ಮಗು 2016ರಲ್ಲೇ ಜನಿಸಬಹುದೆಂದು ನಾವು ನಿರೀಕ್ಷಿಸಿದ್ದೆವು. ಆದರೆ, ಜನನ ನಿರೀಕ್ಷೆಗಿಂತ 5 ದಿನಗಳ ಕಾಲ ವಿಳಂಬವಾಗಿದೆ’’ ಎಂದು ತಾಯಿ ಭಾರತಿ ‘ಸನ್’ಗೆ ಹೇಳಿದರು.
ಗೃಹಿಣಿಯಾಗಿರುವ ಭಾರತಿ ದೇವಿ ಅವರ ಗಂಡ ಅಶ್ವನಿ ಕುಮಾರ್ ಸೇಲ್ಸ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಈಗಾಗಲೇ ಎರಡು ವರ್ಷದ ಪುತ್ರನಿದ್ದಾನೆ.