×
Ad

ಜರ್ಮನಿ: ಹಿಟ್ಲರ್‌ನ ‘ಮೇನ್ ಕಾಂಫ್’ ಪುಸ್ತಕಕ್ಕೆ ಭಾರೀ ಬೇಡಿಕೆ

Update: 2017-01-03 21:04 IST

ಬರ್ಲಿನ್ (ಜರ್ಮನಿ), ಜ. 3: ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಬರೆದ ಪುಸ್ತಕ ‘ಮೇನ್ ಕಾಂಫ್’ನ ಮರುಮುದ್ರಣ ಭಾರೀ ಯಶಸ್ಸು ಕಂಡಿದೆ. ಎರಡನೆ ಜಾಗತಿಕ ಯುದ್ಧದ ಬಳಿಕ ಮೊದಲ ಬಾರಿಗೆ ಮರುಮುದ್ರಣಗೊಂಡ ಪುಸ್ತಕ ತನ್ನ ಆರನೆ ಮರುಮುದ್ರಣದತ್ತ ದಾಪುಗಾಲಿಡುತ್ತಿದೆ.

ಈ ವಿಷಯವನ್ನು ಪುಸ್ತಕದ ಪ್ರಕಾಶಕರಾದ ಇನ್‌ಸ್ಟಿಟ್ಯೂಟ್ ಆಫ್ ಕಾಂಟೆಂಪೊರರಿ ಹಿಸ್ಟರಿ ಆಫ್ ಮ್ಯೂನಿಕ್ ಮಂಗಳವಾರ ತಿಳಿಸಿದೆ.

ಕಳೆದ ವರ್ಷದ ಜನವರಿಯಲ್ಲಿ ಮರುಮುದ್ರಣಗೊಂಡ ಪುಸ್ತಕದ 85,000 ಪ್ರತಿಗಳು ಖರ್ಚಾಗಿವೆ ಎಂದು ಅದು ಹೇಳಿದೆ.

‘‘ಆದಾಗ್ಯೂ, ತೀರಾ ಬಲಪಂಥೀಯ ವಿಚಾರಧಾರೆಯನ್ನು ಉತ್ತೇಜಿಸುವ ಉದ್ದೇಶ ನಮ್ಮದಲ್ಲ. ಸಮಕಾಲೀನ ಪಾಶ್ಚಾತ್ಯ ಸಮಾಜದಲ್ಲಿ ತಲೆಯೆತ್ತುತ್ತಿರುವ ‘ಸರ್ವಾಧಿಕಾರಿ ರಾಜಕೀಯ ನಿಲುವು’ಗಳ ಬಗ್ಗೆ ಚರ್ಚೆ ಹುಟ್ಟು ಹಾಕುವುದು ನಮ್ಮ ಉದ್ದೇಶ’’ ಎಂದು ಇನ್‌ಸ್ಟಿಟ್ಯೂಟ್ ಹೇಳಿದಿದೆ.

ಅದು ಆರಂಭದಲ್ಲಿ ಕೇವಲ 4,000 ಪ್ರತಿಗಳನ್ನಷ್ಟೇ ಮುದ್ರಿಸಲು ಯೋಚಿಸಿತ್ತು, ಆದರೆ ಭಾರೀ ಬೇಡಿಕೆಯ ಹಿನ್ನೆಲೆಯಲ್ಲಿ ಪ್ರತಿಗಳ ಸಂಖ್ಯೆಯನ್ನು ಹೆಚ್ಚಿಸಿತು. ಆರನೆ ಮರುಮುದ್ರಣ ಜನವರಿ ಕೊನೆ ಭಾಗದಲ್ಲಿ ಪುಸ್ತಕದಂಗಡಿಗಳನ್ನು ತಲುಪಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News