ಸಿಎನ್‌ಎನ್ ನನ್ನ ಅತ್ಯಂತ ಕೆಟ್ಟ ಚಿತ್ರ ಬಳಸಿದೆ: ಟ್ರಂಪ್
Update: 2017-01-03 21:41 IST
ವಾಶಿಂಗ್ಟನ್, ಜ. 3: 2016ರ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದ ನೂತನ ಪುಸ್ತಕವೊಂದರ ಮುಖಪುಟಕ್ಕೆ ತನ್ನ ಅತ್ಯಂತ ಕೆಟ್ಟ ಚಿತ್ರವನ್ನು ಟೆಲಿವಿಶನ್ ಚಾನೆಲೊಂದು ಬಳಸಿದೆ ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ದೂರಿದ್ದಾರೆ.
‘ಅನ್‌ಪ್ರಿಸಿಡೆಂಟಡ್’ ಎಂಬ ಹೆಸರಿನ ಪುಸ್ತಕ ಡಿಸೆಂಬರ್‌ನಲ್ಲಿ ಪ್ರಕಟಗೊಂಡಿದೆ. ಅದನ್ನು ಚುನಾವಣಾ ಅವಧಿಯಲ್ಲಿ ಬರೆಯಲಾಗಿತ್ತು ಹಾಗೂ ಅದು ಟ್ರಂಪ್‌ರ ಕಾಲಾನುಗತ ಜೀವನಚಿತ್ರಣವಾಗಿದೆ.
ಸಿಎನ್‌ಎನ್‌ನ ಲೇಖಕರೊಬ್ಬರು ಬರೆದಿರುವ ಪುಸ್ತಕವು ಟ್ರಂಪ್ ಮತ್ತು ಹಿಲರಿ ಕ್ಲಿಂಟನ್ ನಡುವಿನ ಅಧ್ಯಕ್ಷೀಯ ಹಣಾಹಣಿಯ ವಿವರವಾದ ವರದಿಗಳ ಸಂಗ್ರಹವಾಗಿದೆ ಎಂದು ಸಿಎನ್‌ಎನ್ ಹೇಳಿದೆ.