ಪ್ರಧಾನಿ ಮೋದಿಯನ್ನು ಸಿಎಂ ಮೋದಿ ಲೇವಡಿ ಮಾಡುವ ವೀಡಿಯೊ ವೈರಲ್

Update: 2017-01-04 11:44 GMT

‘‘ಇದು ಯಾವುದೇ ಪಕ್ಷಕ್ಕೆ ಸೇರಿದ ಹಣವಲ್ಲ. ಇದು ಯಾವುದೇ ಸರಕಾರಕ್ಕೆ ಸೇರಿದ ಹಣವಲ್ಲ. ಇದು ಜನತೆಯ ಹಣ ’’ ಇವು ನರೇಂದ್ರ ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಬಹಿರಂಗ ಸಭೆಯೊಂದರಲ್ಲಿ ತನಗೆ ಜೈಕಾರ ಹಾಕುತ್ತಿದ್ದ ಬೆಂಬಲಿಗರನ್ನುದ್ದೇಶಿಸಿ ಆಡಿದ್ದ ಮಾತುಗಳು. ಗುಜರಾತಿಗೆ 10,000 ಕೋ.ರೂ.ಗಳ ಆರ್ಥಿಕ ನೆರವು ಒದಗಿಸಿರುವುದಾಗಿ ಆಗಿನ ಯುಪಿಎ ಸರಕಾರದ ಹೇಳಿಕೆಗಳನ್ನು ಪ್ರಸ್ತಾಪಿಸಿ ಮಾತನಾಡುತ್ತಿದ್ದ ಮೋದಿ ‘‘ ನೀವು ಹಣ ಕೊಟ್ಟಿದ್ದೀರೆಂದು ಪದೇ ಪದೇಹೇಳಿಕೊಳ್ಳುತ್ತಲೇ ಇದ್ದೀರಿ. ಆ ಹಣವೇನು ನಿಮ್ಮ ಚಿಕ್ಕಪ್ಪನಿಂದ ಬಂದಿದ್ದೇ ಎನ್ನುವುದನ್ನು ನಾನು ತಿಳಿಯಲು ಬಯಸುತ್ತೇನೆ ’’ಎಂದು ಜನರ ಭಾರೀ ಕರತಾಡನಗಳ ನಡುವೆ ಹೇಳಿದ್ದರು.

 ಇದು ಭವಿಷ್ಯದಲ್ಲಿ ಪ್ರಧಾನಿಯಾಗಿ ತನ್ನ ಭಾಷಣವನ್ನೇ ಅಣಕಿಸಲಿದೆ ಎನ್ನುವುದು ಆಗ ಮೋದಿಯವರಿಗೆ ಗೊತ್ತಿರಲಿಲ್ಲ. ಸೋಮವಾರ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಪರಿವರ್ತನ್ ರ್ಯಾಲಿಯಲ್ಲಿ ಮಾತನಾಡಿದ ಮೋದಿ ‘‘ದಿಲ್ಲಿಯಲ್ಲಿ ನಾವು ಸರಕಾರ ರಚಿಸಿದಾಗಿನಿಂದ ಉತ್ತರ ಪ್ರದೇಶ ಸರಕಾರಕ್ಕೆ ಪ್ರತಿ ವರ್ಷ ಒಂದು ಲಕ್ಷ ಕೋ.ರೂ.ಗಳನ್ನು ನೀಡುತ್ತ ಬಂದಿದ್ದೇವೆ. ಒಂದು ಲಕ್ಷ ಕೋಟಿ ಎಂದರೆ ಸಣ್ಣ ಮೊತ್ತವೇನಲ್ಲ. ಎರಡು ವರ್ಷಗಳಲ್ಲಿ ಉತ್ತರ ಪ್ರದೇಶಕ್ಕೆ ಕೇಂದ್ರದಿಂದ 2.5 ಲ.ಕೋ.ರೂ.ಗಳ ನೆರವು ಹರಿದು ಬಂದಿದೆ ’’ ಎಂದು ಘೋಷಿಸಿದ್ದಾರೆ.

ವೀಡಿಯೊ ಮೋದಿ ಭಾಷಣಗಳಲ್ಲಿನ ವಿರೋಧಾಭಾಸಗಳನ್ನು ಸ್ಪಷ್ಟವಾಗಿ ಬೆಟ್ಟು ಮಾಡಿದೆ, ಜೊತೆಗೆ ಮೋದಿಯವರ ರಾಜಕೀಯ ಭಾಷಣಗಳ ನಾಟಕೀಯತೆಗಳನ್ನೂ..

ರ್ಯಾಲಿಯ ಇನ್ನುಳಿದ ಅವಧಿಯನ್ನು ರಾಹುಲ್ ಗಾಂಧಿ,ಬಿಎಸ್‌ಪಿ ಮತ್ತು ಎಸ್‌ಪಿ ಯನ್ನು ತನ್ನ ಟ್ರೇಡ್‌ಮಾರ್ಕ್ ಆಗಿರುವ ನಾಟಕೀಯ ಶೈಲಿಯಲ್ಲಿ ಟೀಕಿಸಲು ಮೋದಿ ಬಳಸಿಕೊಂಡಿದ್ದಾರೆ.(ಕೆಳಗಿನ ವೀಡಿಯೊ ನೋಡಿ)

 ಒಂದು ಪಕ್ಷವು ತನ್ನ ಮಗನನ್ನು ರಾಜಕೀಯದಲ್ಲಿ ಪ್ರತಿಷ್ಠಾಪಿಸಲು ಕಳೆದ 15 ವರ್ಷಗಳಿಂದಲೂ ಪ್ರಯತ್ನಿಸುತ್ತಿದೆ ಮತ್ತು ಈ ವರೆಗೂ ಯಶಸ್ಸು ಕಂಡಿಲ್ಲ ಎಂದಿರುವ ಮೋದಿ, ಇನ್ನೊಂದು ಪಕ್ಷವು ತನ್ನ ಕಪ್ಪುಹಣವನ್ನು ಬಚ್ಚಿಡುವ ಬಗ್ಗೆ ತಲೆ ಕೆಡಿಸಿಕೊಂಡಿದೆ. ತನ್ನ ಹಣವನ್ನು ಶೇಖರಿಸಿಡಲು ಅದು ಬ್ಯಾಂಕುಗಳತ್ತ ನೋಡುತ್ತಿದೆ ಎಂದಿದ್ದಾರೆ. ಎಸ್‌ಪಿಯನ್ನು ಉದ್ದೇಶಿಸಿ ಮೋದಿ, ಇನ್ನೊಂದು ಪಕ್ಷವಿದೆ ಮತ್ತು ಅದರ ಸಂಪೂರ್ಣ ಶಕ್ತಿ ಕುಟುಂಬವನ್ನು ಉಳಿಸಲು ಅರ್ಪಿತವಾಗಿದೆ ಎಂದು ಕುಟುಕಿದ್ದಾರೆ.

Full View Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News