ಒಂಬತ್ತು ಕೋಟಿ ವರ್ಷ ಹಳೆಯ ಪಳೆಯುಳಿಕೆ ಪತ್ತೆ
Update: 2017-01-04 17:49 IST
ಓಸ್ಟನ್, ಜ.4: ಒಂಬತ್ತು ಕೋಟಿ ವರ್ಷ ಮುಂಚೆ ಸಮುದ್ರದಲ್ಲಿ ಜೀವಿಸಿತ್ತು ಎನ್ನಲಾದ ಡಾಲ್ಫಿನ್‌ಗೆ ಹೋಲುವ ಸರೀಸೃಪದ ಪಳೆಯುಳಿಕೆಯನ್ನು ವಿಜ್ಞಾನಿಗಳು ಕಂಡು ಹುಡುಕಿದ್ದಾರೆ.
ದಕ್ಷಿಣ ಟೆಕ್ಸಾಸ್ ನದಿ ತಟದಲ್ಲಿ ಪರಿಶೋಧನೆ ನಡೆಸುತ್ತಿದ್ದಸಂಶೋಧಕರು ಈಗಲ್‌ಫೋರ್ಡ್ ಬೆಣಚುಕಲ್ಲುಗಳ ಮಧ್ಯೆ ಸಿಲುಕಿದ್ದ ಸರೀಸೃಪದ ಪಳೆಯುಳಿಕೆಗಳನ್ನು ಪತ್ತೆಹಚ್ಚಿದ್ದಾರೆ.
ಅಸ್ತಿಪಂಜರ ಬೆಣಚು ಕಲ್ಲಿನ ನಡಿ ಸಿಲುಕಿದ್ದ ಸ್ಥಿತಿಯಲ್ಲಿ ಸಿಕ್ಕಿದೆ ಎಂದು ಪಿಎಚ್‌ಡಿ ವಿದ್ಯಾರ್ಥಿ ಜೋಷ್ ಲೈವ್ಲಿ ಹೇಳಿದ್ದಾರೆ. ಅಸ್ಥಿಪಂಜರ ಕುರಿತು ಹೆಚ್ಚಿನ ಅಧ್ಯಯನ ಅಗತ್ಯ ಎಂದು ಅವರು ತಿಳಿಸಿದ್ದಾರೆ. ಈ ಹಿಂದೆ ಟೆಕ್ಸಾಸ್‌ನಲ್ಲಿಯಲ್ಲಿಯೇ ಇಕ್ತಿಯೊಝರ್ ಸರೀಸೃಪದ ಪಳೆಯುಳಿಕೆ ಸಿಕ್ಕಿತ್ತು.
9.7ಕೋಟಿ ವರ್ಷ ಮುಂಚಿನ ಸರೀಸೃಪ ಪಳೆಯುಳಿಕೆ ಅದೆಂದು ಅಂದಾಜಿಸಲಾಗಿತ್ತು. ಈಗ ಪತ್ತೆಯಾದ ಸರೀಸೃಪದ ಪಳೆಯುಳಿಕೆ 9.2 ಕೋಟಿ ವರ್ಷ ಹಳೆಯದು ಎಂದು ವರದಿಯಾಗಿದೆ.