×
Ad

ಫೋರ್ಬ್ಸ್ ಸಾಧಕರ ಪಟ್ಟಿಯಲ್ಲಿ 30 ಭಾರತೀಯ ಮೂಲದವರು

Update: 2017-01-04 21:39 IST

ನ್ಯೂಯಾರ್ಕ್, ಜ. 4: ಯಥಾಸ್ಥಿತಿಯನ್ನು ಮುರಿದು ಜಗತ್ತನ್ನು ಪರಿವರ್ತಿಸಲು ಪ್ರಯತ್ನಿಸುವ 30 ವರ್ಷಕ್ಕಿಂತ ಕೆಳಗಿನ ಅದ್ಭುತ ಸಾಧಕರ 2017ರ ಫೋರ್ಬ್ಸ್ ಪಟ್ಟಿಯಲ್ಲಿ ಮೂವತ್ತಕ್ಕೂ ಅಧಿಕ ಭಾರತೀಯ ಮೂಲದ ಸಂಶೋಧಕರು, ಉದ್ಯಮಿಗಳು ಮತ್ತು ನಾಯಕರು ಸ್ಥಾನ ಪಡೆದಿದ್ದಾರೆ.
ಆರೋಗ್ಯ ರಕ್ಷಣೆ, ಉತ್ಪಾದನೆ, ಕ್ರೀಡೆ ಮತ್ತು ಹಣಕಾಸು ಸೇರಿದಂತೆ 20 ಕ್ಷೇತ್ರಗಳಲ್ಲಿ ಬೃಹತ್ ಸಾಧನೆ ಮಾಡಿರುವ 30 ಮಂದಿಯ ಹೆಸರು ಫೋರ್ಬ್ಸ್ ಪಟ್ಟಿಯಲ್ಲಿದೆ.ಪಟ್ಟಿಯಲ್ಲಿ ಒಟ್ಟು 600 ಮಂದಿ ಇದ್ದಾರೆ.

ಭಾರತೀಯ ಸಾಧಕರ ಪಟ್ಟಿಯಲ್ಲಿ ಕಾಮಾಲೆ ರೋಗದ ಚಿಕಿತ್ಸೆಯಲ್ಲಿ ಮನೆಯಲ್ಲಿ ಬಳಸಬಹುದಾದ ಹಾಗೂ ಒಯ್ಯಬಹುದಾದ ಫೋಟೊತೆರಪಿ ಸಾಧನವನ್ನು ಅಭಿವೃದ್ಧಿಪಡಿಸಿದ ನಿಯೊಲೈಟ್ ಸಂಸ್ಥೆಯ ಸಹಸಂಸ್ಥಾಪಕ 27 ವರ್ಷದ ವಿವೇಕ್ ಕೊಪ್ಪರ್ತಿ ಇದ್ದಾರೆ.

27 ವರ್ಷದ ಪ್ರಾರ್ಥನಾ ದೇಸಾಯಿ ತನ್ನ ಹಾರ್ವರ್ಡ್ ಪದವಿ ಶಾಲೆ ಶಿಕ್ಷಣವನ್ನು ಕೈಬಿಟ್ಟು, ಅಭಿವೃದ್ಧಿಶೀಲ ಜಗತ್ತಿನ ಜನರಿಗೆ ಔಷಧವನ್ನು ತೆಗೆದುಕೊಂಡು ಹೋಗುವ ಡ್ರೋನ್‌ಗಳತ್ತ ಗಮನಹರಿಸಿದರು. ಅವರ ಹೆಸರು ಪಟ್ಟಿಯಲ್ಲಿದೆ.

28 ವರ್ಷದ ಶಾನ್ ಪಟೇಲ್ ಹಾರ್ವರ್ಡ್ ವೈದ್ಯಕೀಯ ಶಾಲೆಯಲ್ಲಿ ಮೂಳೆ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಅವರೂ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News