×
Ad

ಟರ್ಕಿ ನೈಟ್‌ಕ್ಲಬ್ ಹಂತಕನ ಗುರುತು ಪತ್ತೆ: ವಿದೇಶ ಸಚಿವ

Update: 2017-01-04 21:44 IST

ಇಸ್ತಾಂಬುಲ್, ಜ. 4: ಟರ್ಕಿಯ ಇಸ್ತಾಂಬುಲ್‌ನ ನೈಟ್‌ಕ್ಲಬ್ ಒಂದರಲ್ಲಿ ಹೊಸ ವರ್ಷಾಚರಣೆಯಲ್ಲಿ ನಿರತರಾಗಿದ್ದ ಜನರ ಹತ್ಯಾಕಾಂಡ ನಡೆಸಿದ ಬಂದೂಕುಧಾರಿಯನ್ನು ಅಧಿಕಾರಿಗಳು ಗುರುತಿಸಿದ್ದಾರೆ ಎಂದು ವಿದೇಶ ಸಚಿವ ವೌಲುತ್ ಕವುಸೊಗ್ಲು ಬುಧವಾರ ಹೇಳಿದ್ದಾರೆ.

ಆದಾಗ್ಯೂ ಅವರು ದುಷ್ಕರ್ಮಿಯ ಹೆಸರನ್ನು ಹೇಳಲಿಲ್ಲ ಹಾಗೂ ಆತನ ಬಗ್ಗೆ ಯಾವುದೇ ವಿವರಗಳನ್ನು ನೀಡಲಿಲ್ಲ.
ಹಂತಕನು ಬಾಸ್ಫರಸ್‌ನಲ್ಲಿನ ಪ್ರಸಿದ್ಧ ನೈಟ್ ಕ್ಲಬ್ ಒಂದಕ್ಕೆ ದಾಳಿ ನಡೆಸಿ 120 ಗುಂಡುಗಳನ್ನು ಸಿಡಿಸಿದನು. ಈ ದಾಳಿಯಲ್ಲಿ 39 ಮಂದಿ ಮೃತಪಟ್ಟಿದ್ದಾರೆ. ಅವರ ಪೈಕಿ 27 ಮಂದಿ ವಿದೇಶೀಯರು.ಹತ್ಯಾಕಾಂಡದ ಹೊಣೆಯನ್ನು ಐಸಿಸ್ ಸೋಮವಾರ ಹೊತ್ತಿದೆ.

ಕ್ಲಬ್‌ನಿಂದ ತಪ್ಪಿಸಿಕೊಂಡ ಹಂತಕನು ಈಗಲೂ ತಲೆಮರೆಸಿಕೊಂಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News