ಪ್ರಧಾನಿ ಸುರಕ್ಷತಾ ತಂಡಕ್ಕೆ ನುಗ್ಗಿದ ನಕಲಿ ಐಪಿಎಸ್ ಅಧಿಕಾರಿ !
ಪಾಟ್ನಾ, ಜ. 5 : ಸಿಕ್ಖರ 10ನೇ ಗುರು ಗೋವಿಂದ್ ಸಿಂಗ್ ಅವರ 350ನೇ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಇಂದು ಪಾಟ್ನಾ ತಲುಪುವ ಸ್ವಲ್ಪವೇ ಮೊದಲು ಬಿಹಾರ ಪೊಲೀಸರು ಒಬ್ಬ ನಕಲಿ ಐಪಿಎಸ್ ಅಧಿಕಾರಿಯನ್ನು ಬಂಧಿಸಿದ್ದಾರೆ. ಪ್ರಧಾನಿಯ ಸುರಕ್ಷಾ ಸಂಬಂಧ ನಿಯೋಜನೆಗೊಂಡಿದ್ದ ಪೊಲೀಸರಿಗೆ ಈ ಸಮವಸ್ತ್ರ ಧರಿಸಿದ್ದ ನಕಲಿ ಐಪಿಎಸ್ ಅಧಿಕಾರಿ ನಿರ್ದೇಶನಗಳನ್ನು ನೀಡುತ್ತಿದ್ದನೆನ್ನಲಾಗಿದೆ. ಆದರೆ ಆತನ ಬಗ್ಗೆ ಸ್ವಲ್ಪವೇ ಹೊತ್ತಿನಲ್ಲಿ ಇತರ ಪೊಲೀಸ್ ಸಿಬ್ಬಂದಿಗೆ ಸಂಶಯ ಮೂಡುತ್ತಿದ್ದಂತೆಯೇ ಆತನನ್ನು ಬಂಧಿಸಲಾಗಿದೆ. ಅದರೆ ಕೆಲವು ಮಾಧ್ಯಮ ವರದಿಗಳ ಪ್ರಕಾರ ಆರೋಪಿ ಕಳೆದೆರಡು ದಿನಗಳಿಂದ ಸಚಿವಾಲಯದ ಹೊರಗೆ ಪೊಲೀಸ್ ಸಿಬ್ಬಂದಿಗಳಿಗೆ ಆದೇಶ ನೀಡುತ್ತಿದ್ದ.
ಬಂಧಿತ ವ್ಯಕ್ತಿಯ ವಿಚಾರಣೆ ನಡೆಯುತ್ತಿದೆಯೆಂದು ಪಾಟ್ನಾದ ಹಿರಿಯ ಫೊಲೀಸ್ ಅಧಿಕ್ಷಕ ಮನು ಮಹಾರಾಜ್ ಅವರು ತಿಳಿಸಿದ್ದಾರೆ. ಪ್ರಧಾನಿ ಭೇಟಿಯ ಸಂದರ್ಭ ಪಾಟ್ನಾದಲ್ಲಿ ಕಟ್ಟುನಿಟ್ಟಿನ ಸುರಕ್ಷಾ ವ್ಯವಸ್ಥೇ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಇಂದು ನಡೆದ ಗುರು ಗೋವಿಂದ್ ಸಿಂಗ್ ಜಯಂತಿ ಸಮಾರಂಭದಲ್ಲಿ ಪ್ರಧಾನಿ ಮೋದಿ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾಗವಹಿಸಿದ್ದರು. ಗುರು ಗೋವಿಂದ್ ಸಿಂಗ್ ಸ್ಮರಣಾರ್ಥ ಅಂಚೆ ಚೀಟಿ ಕೂಡ ಬಿಡುಗಡೆಗೊಳಿಸಿದ ಪ್ರಧಾನಿ ಅಸ್ಥಾಯಿ ಗುರುದ್ವಾರದಲ್ಲಿ ಆಯೋಜಿಸಲಾದ ಲಂಗರ್ ನಲ್ಲೂ ಪಾಲ್ಗೊಂಡರು.
ಪ್ರಧಾನಿ ಮೋದಿಯ ಪಾಟ್ನಾ ಭೇಟಿಯ ಸಂದರ್ಭ ಖಾಲಿಸ್ಥಾನಿ ಆತಂಕವಾದಿಗಳು ತೊಂದರೆಯುಂಟು ಮಾಡಬಹುದೆನ್ನುವ ಶಂಕೆಯ ಹಿನ್ನೆಲೆಯಲ್ಲಿನಗರದಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತಲ್ಲದೆ ಕೇಂದ್ರ ಸುರಕ್ಷಾ ಏಜನ್ಸಿಗಳು ಕೆಲ ಶಂಕಿತರ ಭಾವಚಿತ್ರಗಳನ್ನೂ ಬಿಹಾರ ಪೊಲೀಸರಿಗೆ ನೀಡಿದ್ದವು.