×
Ad

ಪಕ್ಷದ ಮೇಲಿನ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸಿದ ಅಖಿಲೇಶ್

Update: 2017-01-05 21:07 IST

ಲಕ್ನೋ,ಜ.5: ಸಮಾಜವಾದಿ ಪಾರ್ಟಿಯ ಮೇಲಿನ ತನ್ನ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸಿರುವ ಅಖಿಲೇಶ್ ಯಾದವ ಅವರು ಗುರುವಾರ ಇನ್ನೂ ಏಳು ಜಿಲ್ಲೆಗಳಿಗೆ ಪಕ್ಷದ ವರಿಷ್ಠರನ್ನು ನೇಮಕಗೊಳಿಸಿದರು. ಬುಧವಾರ ನಾಲ್ಕು ಜಿಲ್ಲೆಗಳ ಪಕ್ಷದ ಸಮಿತಿಗಳ ಮುಖ್ಯಸ್ಥರನ್ನು ಅವರು ನೇಮಕಗೊಳಿಸಿದ್ದರು.

ಪಕ್ಷದ ರಾಷ್ಟ್ರಾಧ್ಯಕ್ಷ ಅಖಿಲೇಶ್ ಯಾದವರ ನಿರ್ದೇಶದ ಮೇರೆಗೆ ರಾಜ್ಯ ಘಟಕದ ಅಧ್ಯಕ್ಷ ನರೇಶ ಉತ್ತಮ್ ಅವರು ಈ ನೇಮಕಗಳನ್ನು ಮಾಡಿದ್ದಾರೆ ಎಂದು ಅಖಿಲೇಶ್ ಬಣವು ಹೇಳಿಕೆಯಲ್ಲಿ ತಿಳಿಸಿದೆ. ಈ ಜಿಲ್ಲೆಗಳ ಹಾಲಿ ಪಕ್ಷಾಧ್ಯಕ್ಷರನ್ನು ತಕ್ಷಣವೇ ಜಾರಿಗೆ ಬರುವಂತೆ ವಜಾ ಮಾಡಲಾಗಿದೆ.

 ತನ್ಮಧ್ಯೆ ಕ್ವಾಮಿ ಏಕತಾ ದಳದ ಶಾಸಕ ಸಿಗ್ಬತುಲ್ಲಾ ಅನ್ಸಾರಿ ಅವರು ಅಖಿಲೇಶರನ್ನು ಭೇಟಿಯಾಗಿದ್ದರು. ಮುಖ್ಯಮಂತ್ರಿಯ ಆಹ್ವಾನದ ಮೇರೆಗೆ ಅವರನ್ನು ಭೇಟಿಯಾಗಿದ್ದಾಗಿ ಸಿಗ್ಬತುಲ್ಲಾ ಸುದ್ದಿಗಾರರಿಗೆ ತಿಳಿಸಿದರು.

 ಕಳೆದ ವರ್ಷ ಎಸ್‌ಪಿಯೊಂದಿಗೆ ಗ್ಯಾಂಗ್‌ಸ್ಟರ್ ರಾಜಕಾರಣಿ ಮುಖ್ತಾರ್ ಅನ್ಸಾರಿಯ ಕ್ವಾಮಿ ಏಕತಾ ದಳದ ವಿಲೀನವನ್ನು ಅಖಿಲೇಶ್ ವಿರೋಧಿಸಿದ್ದರೆ, ತಂದೆ ಮುಲಾಯಂ ಅದನ್ನು ಬೆಂಬಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News