ಆಫ್ರಿಕ ಆಟಗಾರರಾದ ಅಬಾಟ್, ರೊಸ್ಸೌ ನಿವೃತ್ತಿ
Update: 2017-01-05 23:43 IST
ಲಂಡನ್, ಜ.5: ಇಂಗ್ಲೆಂಡ್‌ನ ಕೌಂಟಿ ತಂಡ ಹ್ಯಾಂಪ್‌ಶೈರ್ ಅವರೊಂದಿಗೆ ಸಹಿ ಹಾಕಿರುವ ದಕ್ಷಿಣ ಆಫ್ರಿಕದ ಆಟಗಾರರಾದ ಕೈಲ್ ಅಬಾಟ್ ಹಾಗೂ ರಿಲಿ ರೊಸ್ಸೌ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ.
ಆಫ್ರಿಕದ ಆಲ್‌ರೌಂಡರ್ ಅಬಾಟ್ ಹ್ಯಾಂಪ್‌ಶೈರ್ ಕ್ರಿಕೆಟ್ ತಂಡದೊಂದಿಗೆ 4 ವರ್ಷಗಳ ಅವಧಿಗೆ ಸಹಿ ಹಾಕಿದರೆ, ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ರೊಸ್ಸೌ 3ವರ್ಷ ಅವಧಿಗೆ ಸಹಿ ಹಾಕಿದ್ದಾರೆ. ದಕ್ಷಿಣ ಆಫ್ರಿಕ ಕ್ರಿಕೆಟ್ ಮಂಡಳಿಗೆ ಮನವರಿಕೆ ಮಾಡಿಕೊಡಲು ವಿಫಲರಾಗಿರುವ ಈ ಇಬ್ಬರು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ.
ನಮ್ಮ ತಂಡದ ಇಬ್ಬರು ಆಟಗಾರರ ನಿರ್ಧಾರ ದಕ್ಷಿಣ ಆಫ್ರಿಕ ಕ್ರಿಕೆಟ್ ಮಾತ್ರವಲ್ಲ ಇಂಟರ್‌ನ್ಯಾಶಲ್ ಕ್ರಿಕೆಟ್‌ಗೆ ಬೇಸರದ ವಿಷಯ ಎಂದು ದ.ಆಫ್ರಿಕದ ಸಿಇಒ ಹಾರೂನ್ ಲಾರ್ಗಟ್ ಹೇಳಿದ್ದಾರೆ.