ಹಳಿ ತಪ್ಪಿದ ಗೂಡ್ಸ್‌ರೈಲು, ರೈಲು ಸಂಚಾರಕ್ಕೆ ಅಡಚಣೆ

Update: 2017-01-06 14:14 GMT

ಹೈದರಾಬಾದ್, ಜ.6: ಕಲ್ಲಿದ್ದಲು ತುಂಬಿಕೊಂಡಿದ್ದ ಗೂಡ್ಸ್ ರೈಲೊಂದು ಮಹಾರಾಷ್ಟ್ರದ ವಿಹಿರ್‌ಗಾಂವ್ ಸ್ಟೇಷನ್‌ನಲ್ಲಿ ಶುಕ್ರವಾರ ಮುಂಜಾವ ಹಳಿ ತಪ್ಪಿದ ಕಾರಣ ರೈಲು ಸಂಚಾರಕ್ಕೆ ಅಡಚಣೆಯಾಯಿತು.

 ದಕ್ಷಿಣ ಕೇಂದ್ರ ರೈಲ್ವೇಯ ಕಾಝಿಪೇಟೆ ಬಲರ್ಷ ವಿಭಾಗದಲ್ಲಿ ಈ ಘಟನೆ ನಡೆದಿದೆ ಎಂದು ದಕ್ಷಿಣ ಕೇಂದ್ರ ರೈಲ್ವೇ ವಿಭಾಗದ ಪ್ರಧಾನ ಸಾರ್ವಜನಿಕ ಸಂಪರ್ಕಾಧಿಕಾರಿ ಉಮಾಶಂಕರ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೈದರಾಬಾದ್-ಹೊಸದಿಲ್ಲಿ-ತೆಲಂಗಾಣ ಎಕ್ಸ್‌ಪ್ರೆಸ್, ಹೊಸದಿಲ್ಲಿ -ಹೈದರಾಬಾದ್-ತೆಲಂಗಾಣ ಎಕ್ಸ್‌ಪ್ರೆಸ್, ಕಾಝಿಪೇಟೆ-ಬಲರ್ಷ ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ಅಲ್ಲದೆ 8 ರೈಲುಗಳ ಸಂಚಾರವನ್ನು ಆಂಶಿಕವಾಗಿ ರದ್ದುಪಡಿಸಲಾಗಿದೆ ಮತ್ತು ಹಲವು ರೈಲುಗಳ ಮಾರ್ಗ ಬದಲಿಸಲಾಗಿದೆ ಎಂದು ರೈಲ್ವೇ ಮೂಲಗಳು ತಿಳಿಸಿವೆ.

 ಹಿರಿಯ ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು 140 ಟನ್ ಸಾಮರ್ಥ್ಯದ ಕ್ರೇನ್‌ಗಳನ್ನು ಬಳಸಿಕೊಂಡು ದುರಸ್ತಿ ಕಾರ್ಯ ಭರದಿಂದ ಸಾಗುತ್ತಿದೆ. ಪ್ರಮುಖ ರೈಲು ನಿಲ್ದಾಣಗಳಲ್ಲಿ ಹೆಲ್ಪ್‌ಲೈನ್ ಕೌಂಟರ್ ಮತ್ತು ಹೆಲ್ಪ್‌ಲೈನ್ ನಂಬರ್‌ಗಳನ್ನು ಸ್ಥಾಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News