ನೇಪಾಳಕ್ಕೆ 100 ಕೋಟಿ ರೂ. ಮೊತ್ತದ 100ರ ನೋಟುಗಳು
Update: 2017-01-06 21:07 IST
ಕಠ್ಮಂಡು, ಜ. 6: ನೂರು ಕೋಟಿ ರೂಪಾಯಿ ಬೆಲೆಯ ರೂ. 100 ಮುಖ ಬೆಲೆಯ ಕರೆನ್ಸಿ ನೋಟುಗಳನ್ನು ನೇಪಾಳಕ್ಕೆ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಒಪ್ಪಿಕೊಂಡಿದೆ. ರೂ. 100 ಮುಖ ಬೆಲೆಯ ಭಾರತೀಯ ಕರೆನ್ಸಿಯ ಕೊರತೆಯನ್ನು ನೇಪಾಳ ಎದುರಿಸುತ್ತಿದ್ದು, ಹೆಚ್ಚಿನ ಚ್ಚನ್ನು ಪೂರೈವಂತೆ ನೇಪಾಳ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ರೂ. 500 ಮತ್ತು ರೂ. 1000 ಮುಖ ಬೆಲೆಯ ನೋಟುಗಳನ್ನು ಭಾರತ ಸರಕಾರ ನವೆಂಬರ್ 8ರಂದು ನಿಷೇಧಿಸಿದ ಹಿನ್ನೆಲೆಯಲ್ಲಿ, ರೂ. 100 ಮುಖಬೆಲೆಯ ನೋಟುಗಳನ್ನು ಆಮದು ಮಾಡಿಕೊಳ್ಳುವ ನೇಪಾಳ ರಿಸರ್ವ್ ಬ್ಯಾಂಕ್‌ನ ಯೋಜನೆಯು ಮುಂದೂಡಲ್ಪಟ್ಟಿತ್ತು.
ಕರೆನ್ಸಿ ನೋಟು ಅಮಾನ್ಯದ ಹಿನ್ನೆಲೆಯಲ್ಲಿ ಪರಿಸ್ಥಿತಿ ಸುಧಾರಿಸುವವರೆಗೆ ಕಾಯುವಂತೆ ಈ ಮೊದಲು ಆರ್‌ಬಿಐ ನೇಪಾಳದ ರಿಸರ್ವ್ ಬ್ಯಾಂಕ್‌ಗೆ ಸೂಚಿಸಿತ್ತು ಎಂದು ‘ಹಿಮಾಲಯನ್ ಟೈಮ್ಸ್’ ಶುಕ್ರವಾರ ವರದಿ ಮಾಡಿದೆ.