ಢಾಕಾ ದಾಳಿ ಸೂತ್ರಧಾರಿಯ ಹತ್ಯೆ
Update: 2017-01-06 21:36 IST
ಢಾಕಾ, ಜ. 6: ಕಳೆದ ವರ್ಷ ಬಾಂಗ್ಲಾದೇಶದ ಕೆಫೆಯೊಂದರ ಮೇಲೆ ನಡೆದ ದಾಳಿಯ ಸೂತ್ರಧಾರಿಗಳ ಪೈಕಿ ಓರ್ವನೆನ್ನಲಾದ ಭಯೋತ್ಪಾದಕನು ರಾಜಧಾನಿ ಢಾಕಾದಲ್ಲಿ ಶುಕ್ರವಾರ ಮುಂಜಾನೆ ನಡೆದ ದಾಳಿಯ ವೇಳೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಢಾಕಾದ ರೇಯರ್ ಬಝಾರ್ ಪ್ರದೇಶದಲ್ಲಿರುವ ಕಟ್ಟಡವೊಂದರ ಮೇಲೆ ಪೊಲೀಸರು ನಡೆಸಿದ ದಾಳಿಯ ವೇಳೆ ನೂರುಲ್ ಇಸ್ಲಾಮ್ ಮರ್ಝನ್ ಮತ್ತು ಇನ್ನೋರ್ವ ಶಂಕಿತ ಭಯೋತ್ಪಾದಕ ಮೃತಪಟ್ಟಿದ್ದಾರೆ ಎಂದು ಢಾಕಾ ಮೆಟ್ರೊಪಾಲಿಟನ್ ಪೊಲೀಸ್‌ನ ವಕ್ತಾರರೊಬ್ಬರು ಎಎಫ್‌ಪಿಗೆ ತಿಳಿಸಿದರು.
ಮರ್ಝನ್ ಗುಂಡಿನ ದಾಳಿಯಲ್ಲಿ ಮೃತಪಟ್ಟನೆ ಅಥವಾ ಆತ್ಮಹತ್ಯೆ ಮಾಡಿಕೊಂಡನೇ ಎನ್ನುವುದು ತಕ್ಷಣಕ್ಕೆ ಗೊತ್ತಾಗಿಲ್ಲ.
ಕಳೆದ ವರ್ಷದ ಜುಲೈ 1ರಂದು ಢಾಕಾದ ಹೋಲಿ ಆರ್ಟಿಸಾನ್ ಬೇಕರಿಯ ಮೇಲೆ ನಡೆದ ದಾಳಿಯ ಸೂತ್ರಧಾರಿಗಳ ಪೈಕಿ ಮರ್ಝನ್ ಒಬ್ಬನಾಗಿದ್ದನು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಆ ದಾಳಿಯಲ್ಲಿ 18 ವಿದೇಶೀಯರು ಮೃತಪಟ್ಟಿದ್ದಾರೆ.