ಚಿಂದಿ ಆಯುವವನಿಗೆ ಸಿಕ್ಕಿತು 9.8 ಲಕ್ಷ ರೂ. ಮೊತ್ತದ ಹಳೆಯ ನೋಟು
Update: 2017-01-06 22:43 IST
ಋಶಿಕೇಶ್, ಡಿ.6: ಗಂಗಾ ನದಿಯ ತೀರದಲ್ಲಿ ಚಿಂದಿ ಆಯುತ್ತಿದ್ದ ವ್ಯಕ್ತಿಯೋರ್ವನಿಗೆ ಪೊದೆಗಳೆಡೆಯಲ್ಲಿ 9.8 ಲಕ್ಷ ರೂ. ಮೊತ್ತದ ಹಳೆಯ ನೋಟುಗಳು ಸಿಕ್ಕಿದೆ. ನೇಪಾಳ ಮೂಲದ ಉತ್ತಮ ಥಾರು ಎಂಬಾತ ಚಿಂದಿ ಆಯುತ್ತಿದ್ದ ವೇಳೆ ಪೊದೆಗಳೆಡೆಯಲ್ಲಿ ಹಳೆಯ 500 ರೂ. ಮುಖಬೆಲೆಯ ನೋಟುಗಳು ರಾಶಿ ಬಿದ್ದಿರುವುದನ್ನು ಗಮನಿಸಿ, ಇವನ್ನು ಒಟ್ಟು ಮಾಡಿ ಮುನ್ನೀ-ಕಿ-ರೇಟಿ ಪೊಲೀಸ್ ಠಾಣೆಗೆ ತಂದೊಪ್ಪಿಸಿದ್ದಾನೆ. ಇವನ್ನು ಲೆಕ್ಕ ಮಾಡಿದಾಗ ಒಟ್ಟು 9.80 ಲಕ್ಷ ರೂ. ವೌಲ್ಯದ ನೋಟುಗಳಾಗಿತ್ತು ಎಂದು ಠಾಣೆಯ ಅಧಿಕಾರಿ ತಿಳಿಸಿದ್ದು, ಪ್ರಕರಣದ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.