ಉಜ್ವಲ ಯೋಜನೆಯ ಲಾಭ?
Update: 2017-01-07 00:28 IST
ಮಾನ್ಯರೆ,
ಸಮಾಜದ ಆರ್ಥಿಕವಾಗಿ ತಳಮಟ್ಟದಲ್ಲಿರುವ 1.5ಕೋಟಿ ಮಹಿಳೆಯರಿಗೆ ಅಡುಗೆ ಅನಿಲ ಸಂಪರ್ಕ ನೀಡುವುದಾಗಿ ಹೇಳಿದ್ದ ಪ್ರಧಾನಿ ಮೋದಿಯವರ ಯೋಜನೆ ವಿಫಲವಾಗಿದೆ.
ಬಿಪಿಎಲ್ ಕುಟುಂಬದ ಮಹಿಳೆಯನ್ನು ಎಸ್‌ಇಸಿಸಿಯಲ್ಲಿ ಗುರುತಿಸಿ, ಅಡುಗೆ ಅನಿಲ ಸಂಪರ್ಕ ನೀಡುವುದಾಗಿ ಕೇಂದ್ರ ಸರಕಾರ ಆಸೆ ಹುಟ್ಟಿಸಿತ್ತು. ಆದರೆ ಈ ಯೋಜನೆಯಲ್ಲಿ ಕೇವಲ 5ಕೆಜಿ ಅಡುಗೆ ಅನಿಲ ಕೊಡುತ್ತಿದ್ದು ಇದು ಬಡವರ ಮೂಗಿಗೆ ತುಪ್ಪ ಹಚ್ಚುವ ಕೆಲಸವಾಗಿದೆ.
ಅಲ್ಲದೆ ಇದನ್ನು ಪಡೆಯಲು ರೂ. 1,000ಅನ್ನು ಕೂಡಾ ಪಾವತಿಸ ಬೇಕಾಗಿದೆ. ಇದರಿಂದ ಬಡ ಮಹಿಳೆಯರಿಗೆ ಯಾವುದೇ ರೀತಿಯಲ್ಲಿ ಅನುಕೂಲ ವಾಗದು. ಆದ್ದರಿಂದ ಈ ಯೋಜನೆ ಜನಪರವೆನಿಸದು. ಇದು ಮೋದಿ ಸರಕಾರ ಜನರಿಗೆ ಮಾಡಿದ ವಿಶ್ವಾಸದ್ರೋಹ.