ಬಾಲಕಿಗೆ ಲೈಂಗಿಕ ದೌರ್ಜನ್ಯ; ಮೇಘಾಲಯದ ಎಂಎಲ್‌ಎ ಬಂಧನ

Update: 2017-01-07 05:40 GMT

ಗುವಾಹಟಿ, ಜ.7:  ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ  ಮೇಘಾಲಯದ ಎಂಎಲ್‌ಎ ಜ್ಯೂಲಿಯಸ್‌ ಡೋರ್ಪಾಂಗ್‌ನ್ನು ಇಂದು ಬೆಳಗ್ಗೆ ಪೊಲೀಸರು ಗುವಾಹಟಿಯಲ್ಲಿ ಬಂಧಿಸಿದ್ದಾರೆ.
ಹದಿನಾಲ್ಕು ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿದ್ದ ಪಕ್ಷೇತರ ಎಂಎಲ್‌ಎ ಜ್ಯೂಲಿಯಸ್‌ ಡೋರ್ಪಾಂಗ್‌ ತಲೆಮರೆಸಿಕೊಂಡಿದ್ದರು. ಅವರನ್ನು ಬಂಧಿಸಲು ಜ.4ರಂದು ಸ್ಥಳೀಯ ನ್ಯಾಯಾಲಯ ಜಾಮೀನುರಹಿತ ವಾರೆಂಟ್ ಹೊರಡಿಸಿತ್ತು.

ಅಸ್ಸಾಂ ಕ್ರೈಮ್‌ ಬ್ರಾಂಚ್‌ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು  ಮೇಘಾಲಯ ಪೊಲೀಸರಿಗೆ ಒಪ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News