ಉದ್ಯೋಗ ಖಾತರಿ, ಪಿಂಚಣಿಗೂ ಇನ್ನು ಆಧಾರ್ ಕಡ್ಡಾಯ
Update: 2017-01-07 13:16 IST
ಹೊಸದಿಲ್ಲಿ,ಜ.7: ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗಖಾತರಿ ಯೋಜನೆ, ನೌಕರರ ಪಿಂಚಣಿ ಯೋಜನೆಗೂ ಕಾರ್ಮಿಕ ಮತ್ತು ಗ್ರಾಮೀಣ ವಿಕಾಸ ಸಚಿವಾಲಯ ಆಧಾರ್ ಕಾರ್ಡ್ ಕಡ್ಡಾಯ ಗೊಳಿಸಿದ್ದು,ಇದಕ್ಕೆ ಸಂಬಂಧಿಸಿದ ಪ್ರಕಟನೆಯನ್ನು ಗಝೆಟ್‌ನಲ್ಲಿ ಪ್ರಕಟಿಸಿದೆ.
ಇನ್ನೂ ಆಧಾರ್ ಕಾರ್ಡ್ ಮಾಡಿಸಿಕೊಳ್ಳದವರು ಜನವರಿ 31ಕ್ಕೆ ಮುಂಚೆ ಅರ್ಜಿಸಲ್ಲಿಸಬೇಕು. ಆಧಾರ್‌ಗೆ ಅರ್ಜಿಸಲ್ಲಿಸಿರುವ ದಾಖಲೆಗಳನ್ನು ಸರಕಾರಕ್ಕೆ ಸಲ್ಲಿಸಬೇಕು. ಉದ್ಯೋಗ ಖಾತರಿ ಯೋಜನೆಯಲ್ಲಿ ಭಾಗಿಯಾಗಿರುವ ಈ ವರೆಗೆ ಆಧಾರ್ ಕೊಡದವರು ಮಾರ್ಚ್ 31ರೊಳಗೆ ಆಧಾರ್ ಕಾರ್ಡ್ ಮಾಡಿಸಲು ಅರ್ಜಿ ಸಲ್ಲಿಸಬೇಕು ಎಂದು ವರದಿ ತಿಳಿಸಿದೆ.