ಅಲೆಪ್ಪೊದ ಕಣ್ಣೀರ ಕವಿತೆಗೆ ಪ್ರಥಮ ಸ್ಥಾನ
Update: 2017-01-07 15:27 IST
ಕ್ಯಾಲಿಕಟ್,ಜ.7: ಗುಂಡುಹಾರಾಟದ ನಡುವೆ ಬದುಕು ಕರಟಿಹೋದ ಸಿರಿಯ ಅಲೆಪ್ಪೊದ ಅಸಹಾಯಕ ಜನರ ದೈನ್ಯತೆ, ನೋವುಗಳ ಕುರಿತು ಕವಿತೆ ಬರೆದ ಎಂ.ಪಿ.ಫಾತಿಮ ಫಿದಾಗೆ ಕೇರಳ ಯು.ಪಿ. ಸ್ಕೂಲ್ ವಿಭಾಗದ ಕವಿತಾ ರಚನಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಲಭಿಸಿದೆ. ಫಾತಿಮಾ ಫಿದಾ ಕೊಡಿಯತ್ತೂರ್ ಜಿಎಂಯುಪಿ ಸ್ಕೂಲ್‌ನ ಏಳನೆ ತರಗತಿ ವಿದ್ಯಾರ್ಥಿನಿ.
"ಕಾಯುವಿಕೆ" ಎಂಬ ವಿಭಾಗದಲ್ಲಿ ನಡೆದ ಸ್ಫರ್ದೆಯಲ್ಲಿ ಅಲೆಪ್ಪೊದ ಜನರ ವಿರುದ್ಧ ಅಧಿಕಾರಿಗಳ ಬೇಜವಾಬ್ದಾರಿತನ, ಕ್ರೌರ್ಯಗಳನ್ನು ಫಾತಿಮಾ ಫಿದಾ ತನ್ನ ಕವಿತೆಯಲ್ಲಿ ಹಿಡಿದು ಕೊಟ್ಟಿದ್ದಾಳೆ. ಕ್ವಿಝ್, ಭಾಷಣ ಸ್ಪರ್ಧೆಗಳಲ್ಲಿ ಉಪಜಿಲ್ಲೆವರೆಗೆ ಇವಳು ಸ್ಪರ್ಧಿಸಿದ್ದಾಳೆ. ಫಾತಿಮಾ ಫಿದಾ ಕೊಡಿಯತ್ತೂರ್ ಪಿಟಿಎಂ ಎಚ್ ಎಸ್.ಎಸ್‌ನ ಮಲೆಯಾಳಂ ಅಧ್ಯಾಪಕ ಅಬ್ದುಲ್ ಮಜೀದ್ ದಂಪತಿಯ ಪುತ್ರಿಯಾಗಿದ್ದಾಳೆ ಎಂದು ವರದಿ ತಿಳಿಸಿದೆ.