×
Ad

ಸಿರಿಯ : ಮಕ್ಕಳಿಗೆ ರೋಗ ಭೀತಿ

Update: 2017-01-07 21:13 IST

ಜಿನೇವ, ಜ. 7: ಸಿರಿಯದ ರಾಜಧಾನಿ ಡಮಾಸ್ಕಸ್‌ನಲ್ಲಿ ನೀರಿನಿಂದ ಹರಡುವ ಕಾಯಿಲೆಗಳಿಗೆ ಒಳಗಾಗುವ ಅಪಾಯಕ್ಕೆ ಮಕ್ಕಳು ಗುರಿಯಾಗಿದ್ದಾರೆ ಎಂದು ವಿಶ್ವಸಂಸ್ಥೆ ಶುಕ್ರವಾರ ತಿಳಿಸಿದೆ. ಇಲ್ಲಿ 55 ಲಕ್ಷ ಮಂದಿಗೆ ಎರಡು ವಾರಗಳಿಂದ ಸಾಕಷ್ಟು ನೀರು ಸಿಗುತ್ತಿಲ್ಲ ಹಾಗೂ ಕೆಲವು ಸ್ಥಳಗಳಲ್ಲಿ ನೀರಿನ ಪೂರೈಕೆಯೇ ಇಲ್ಲ ಎಂಬಂತಾಗಿದೆ.

‘‘ಮಕ್ಕಳು ನೀರಿನಿಂದ ಹರಡುವ ಕಾಯಿಲೆಗಳಿಗೆ ತುತ್ತಾಗುವ ಗಂಭೀರ ಅಪಾಯವಿದೆ’’ ಎಂದು ಯುನಿಸೆಫ್ ವಕ್ತಾರ ಕ್ರಿಸ್ಟೋಫ್ ಬೌಲಿಯರಕ್ ಹೇಳಿದ್ದಾರೆ.
ರಾಜಧಾನಿಗೆ ನೀರು ಪೂರೈಸುವ ಎರಡು ಮಹತ್ವದ ಮೂಲಗಳಾದ ‘ವಾಡಿ ಬರಡ’ ಮತ್ತು ‘ಐನ್-ಅಲ್-ಫಿಜಾಹ್’ ಜಲಾಶಯಗಳನ್ನು ಉದ್ದೇಶಪೂರ್ವಕವಾಗಿ ಗುರಿಮಾಡಲಾಗಿದೆ ಎಂದು ವಿಶ್ವಸಂಸ್ಥೆ ಡಿಸೆಂಬರ್ 29ರಂದು ಹೇಳಿತ್ತು.

ಸಿರಿಯ ಸರಕಾರ ಮತ್ತು ಹಿಝ್ಬುಲ್ಲಾ ಹೋರಾಟಗಾರರು ವಾಡಿ ಬರಡ ಕಣಿವೆಯಲ್ಲಿ ಪ್ರತಿಪಕ್ಷಗಳ ವಶದಲ್ಲಿರುವ ಗ್ರಾಮಗಳ ಮೇಲೆ ಯುದ್ಧವಿರಾಮದ ಹೊರತಾಗಿಯೂ ಬಾಂಬ್ ಮತ್ತು ಶೆಲ್ ದಾಳಿಗಳನ್ನು ನಡೆಸುತ್ತಿದ್ದಾರೆ.

ಜನರಿಗೆ ನೀರನ್ನು ನಿರಾಕರಿಸುವುದು ಹಾಗೂ ಉದ್ದೇಶಪೂರ್ವಕವಾಗಿ ನೀರು ಪೂರೈಕೆ ವ್ಯವಸ್ಥೆಯನ್ನು ಆತಂಕಕ್ಕೆ ಗುರಿಪಡಿಸುವುದು ಯುದ್ಧಾಪರಾಧವಾಗುತ್ತದೆ ಎಂದು ಸಿರಿಯದಲ್ಲಿರುವ ವಿಶ್ವಸಂಸ್ಥೆಯ ರಾಯಭಾರಿ ಜಾನ್ ಎಗೆಲ್ಯಾಂಡ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News