ಹಿಮ ಮುಟ್ಟಬೇಡಿ: ಜನತೆಗೆ ಅಧಿಕಾರಿಗಳಿಂದ ಎಚ್ಚರಿಕೆ
Update: 2017-01-07 21:18 IST
ಬೀಜಿಂಗ್, ಜ. 7: ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಭಾರೀ ಪ್ರಮಾಣದಲ್ಲಿ ಹಿಮಪಾತವಾಗುತ್ತಿದೆಯಾದರೂ, ಅದನ್ನು ಮುಟ್ಟಿ ಅನುಭವಿಸುವ ಸುಖದಿಂದ ಅಲ್ಲಿನ ಜನರು ವಂಚಿತರಾಗಿದ್ದಾರೆ.
ವಾತಾವರಣದ ಮಾಲಿನ್ಯವನ್ನು ಹಿಮವು ಹೀರಿಕೊಂಡಿರುವುದರಿಂದ ಅದರ ನೇರ ಸಂಪರ್ಕಕ್ಕೆ ಬಾರದಂತೆ ದೇಶದ ಹವಾಮಾನ ಇಲಾಖೆಯು ಇಂದು ಜನರನ್ನು ಎಚ್ಚರಿಸಿದೆ.
ಕಳೆದ ವರ್ಷದ ಕೊನೆಯ ದಿನದಿಂದ ಮಾಲಿನ್ಯಕಾರಕ ಹೊಗೆ ಬೀಜಿಂಗ್ ನಗರವನ್ನು ಆವರಿಸಿಕೊಂಡಿದೆ.
ಈ ವಾರಾಂತ್ಯದಲ್ಲಿ ಹಿಮವು ಗಾಳಿಯನ್ನು ಶುದ್ಧೀಕರಿಸುತ್ತದೆ ಎಂದು ಬೀಜಿಂಗ್ ಹವಾಮಾನ ಇಲಾಖೆ ಹೇಳಿದೆ.