×
Ad

ಅಮರೀಂದರ್ ಸಿಂಗ್ ವಿರುದ್ಧ ಸ್ಪರ್ಧೆ

Update: 2017-01-07 23:53 IST

ಚಂಡಿಗಢ, ಜ.7: ಮಾಜಿ ಸೇನಾ ಮುಖ್ಯಸ್ಥ ಜೆ.ಜೆ.ಸಿಂಗ್ ಅವರಿಂದು ಪಂಜಾಬ್ ಮುಖ್ಯಮಂತ್ರಿ ಸುಖ್‌ಬೀರ್ ಸಿಂಗ್ ಬಾದಲ್ ಸಮ್ಮುಖದಲ್ಲಿ ಅಧಿಕೃತವಾಗಿ ಅಕಾಲಿ ದಳಕ್ಕೆ ಸೇರಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡ ಕ್ಯಾ. ಅಮರೀಂದರ್ ಸಿಂಗ್ ಅವರೆದುರು ಪಟಿಯಾಲಾ ಗ್ರಾಮೀಣ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ.

     ಓರ್ವ ಯೋಧನ ಪುತ್ರ ನಿಮ್ಮನ್ನು ಸೋಲಿಸುತ್ತಾನೆ ಮತ್ತು ಇದೊಂದು ಚಾರಿತ್ರಿಕ ಗೆಲುವಾಗಲಿದೆ ಎಂದು ಅಮರೀಂದರ್ ಸಿಂಗ್‌ರನ್ನು ಉದ್ದೇಶಿಸಿ ಜೆ.ಜೆ.ಸಿಂಗ್ ಹೇಳಿದರು. ಈ ಸ್ಪರ್ಧೆಯಲ್ಲಿ ಓರ್ವ ಕ್ಯಾಪ್ಟನ್, ಸೇನೆಯ ಜನರಲ್‌ನನ್ನು ಸೋಲಿಸಲಿದ್ದಾರೆ ಎಂದು ಅಮರೀಂದರ್ ಸಿಂಗ್ ಶುಕ್ರವಾರ ನೀಡಿದ್ದ ಹೇಳಿಕೆಗೆ ಅವರು ಈ ರೀತಿ ಟಾಂಗ್ ನೀಡಿದ್ದಾರೆ. ಭಾರತೀಯ ಸೇನೆಯ ಪ್ರಪ್ರಥಮ ಸಿಖ್ ಮುಖ್ಯಸ್ಥ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಜನರಲ್ ಜೆ.ಜೆ.ಸಿಂಗ್ 2007ರಲ್ಲಿ ನಿವೃತ್ತರಾಗಿದ್ದರು. ಪಂಜಾಬ್‌ನಲ್ಲಿ 2007ರಿಂದ ಅಧಿಕಾರದಲ್ಲಿರುವ ಶಿರೋಮಣಿ ಅಕಾಲಿ ದಳವು ಬಿಜೆಪಿಯ ಮಿತ್ರ ಪಕ್ಷವಾಗಿದೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News