ಜ.9-15: ಜಿಲ್ಲೆಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹ

Update: 2017-01-07 18:41 GMT

ಉಡುಪಿ, ಜ.7: ರಸ್ತೆ ಸುರಕ್ಷತಾ ಸಪ್ತಾಹವನ್ನು ಉಡುಪಿ ಜಿಲ್ಲೆಯಲ್ಲಿ ಜ.9ರಿಂದ 15ರವರೆಗೆ ಆಚರಿಸಲಾಗುವುದು ಎಂದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಕಾರ್ಯದರ್ಶಿ ಹಾಗೂ ಪ್ರಾದೇಶಿಕ ಸಾರಿಗೆ ಅಕಾರಿ ಆಗಿರುವ ಉಪಸಾರಿಗೆ ಆಯುಕ್ತ ಎಚ್. ಗುರುಮೂರ್ತಿ ಕುಲಕರ್ಣಿ ಹೇಳಿದ್ದಾರೆ. ಜಿಲ್ಲಾಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಸಭೆಯಲ್ಲಿ ಅವರು ಮಾಹಿತಿ ನೀಡಿ ಮಾತನಾಡುತ್ತಿದ್ದರು. ಕುಂದಾಪುರದ ಭಂಡಾರ್‌ಕಾರ್ಸ್‌ ಕಾಲೇಜಿನಲ್ಲಿ ಅಪರಾಹ್ನ 3ಕ್ಕೆೆ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಅವೈಜ್ಞಾನಿಕವಾಗಿ ಬ್ಯಾರಿಕೇಡ್‌ಗಳನ್ನು ಹಾಕಬೇಡಿ. ಅಗತ್ಯವಿರುವೆಡೆ ಮಾತ್ರ ವೈಜ್ಞಾನಿಕವಾಗಿ ಬ್ಯಾರಿಕೇಡ್ ಅಳವಡಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಕಾರಕ್ಕೆ ಸೂಚಿಸುವಂತೆ ಜಿಲ್ಲಾಕಾರಿ ಸಭೆಯಲ್ಲಿ ಸೂಚನೆ ನೀಡಿದರು. ಉಡುಪಿ ನಗರಸಭೆಯ ಪೌರಾಯುಕ್ತರು ನಗರಸಭಾ ವ್ಯಾಪ್ತಿ ದೊಡ್ಡನಗುಡ್ಡೆ ಬಳಿ ಮನ್ನೋಳಿಗುಜ್ಜಿ ರಿಕ್ಷಾ ನಿಲ್ದಾಣವನ್ನು ಅಕೃತವಾಗಿ ಘೋಷಿಸುವ ಬಗ್ಗೆ ಮನವಿ ಮಾಡಿದ್ದು, ಈ ಸಂಬಂಧ ಚರ್ಚೆ ನಡೆಯಿತು. ಬಾರಕೂರಿನ ಮಂದಾರ್ತಿ ರಸ್ತೆಯಲ್ಲಿ ಅಪಘಾತಗಳು ಹೆಚ್ಚು ಸಂಭವಿಸುತ್ತಿದ್ದು, ಈ ಬಗ್ಗೆ ಕ್ರಮಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್‌ಗೆ ಜಿಲ್ಲಾಕಾರಿ ಹೇಳಿದರು.

ರಸ್ತೆ ಬದಿಗಳಲ್ಲಿ ಅತ್ಯಾಕರ್ಷಕ ಹೋರ್ಡಿಂಗ್‌ನಿಂದಲೂ ಅಪಘಾತಗಳು ಸಂಭವಿಸುವ ಅವಕಾಶವಿದೆ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಚಂದ್ರಶೇಖರ್ ಹೇಳಿದರು. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂದಾಪುರ ಬಳಿ ಬಸ್ರೂರು ಮೂರುಕೈ ಜಂಕ್ಷನ್‌ನಲ್ಲಿ ಅಂಡರ್‌ಪಾಸ್ ನಿರ್ಮಾಣಕ್ಕೆ ಜಿಲ್ಲಾಕಾರಿಗಳು ಸಮ್ಮತಿ ಸೂಚಿಸಿದರು.

ಇಂದ್ರಾಳಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬಳಿ ಇರುವ ಬಸ್ ಶೆಲ್ಟರ್‌ನ್ನು ಸ್ಥಳಾಂತರಿಸುವ ಮನವಿ ಬಗ್ಗೆ ನಗರಸಭೆಯ ಅಭಿಪ್ರಾಯ ಪಡೆಯಲು ನಿರ್ಧರಿಸಲಾಯಿತು. ಮಣಿಪಾಲ ಸಿಂಡಿಕೇಟ್ ಸರ್ಕಲ್‌ನಲ್ಲಿರುವ ಜೋಡು ರಸ್ತೆಯಲ್ಲಿ ಹಂಪ್ಸ್ ಬದಲು ಹೊಸ ವಿಧಾನದ ರ್ಲಿೆಕ್ಟರ್ ಪೈಂಟ್ ಹಾಕುವ ಮೂಲಕ ವಾಹನಗಳು ನಿಧಾನವಾಗಿ ಚಲಿಸುವಂತೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲು ವೆಂಕಟೇಶ್ ಸೂಚಿಸಿದರು.

ಉಡುಪಿಯ ಮುಖ್ಯ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ ಹಾಗೂ ುಟ್‌ಪಾತ್‌ನಲ್ಲಿ ತಳ್ಳುಗಾಡಿ ಮತ್ತು ಬೀದಿ ವ್ಯಾಪಾರ ನಿಷೇಸುವ ಕುರಿತು ನಗರಸಭೆಯಿಂದ ಬಂದ ಮನವಿ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಜಿಲ್ಲಾಕಾರಿ, ಇರುವ ಕಾನೂನು, ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನ ಮುಖ್ಯ ಎಂದರು.

 ಸಭೆಯಲ್ಲಿ ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್, ವಿವಿಧ ಇಲಾಖೆಯ ಅಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News