ವಿದ್ಯುತ್ ಕಂಬಕ್ಕೆ ಢಿಕ್ಕಿ: ಲಾರಿ ಪಲ್ಟಿ

Update: 2017-01-07 18:44 GMT

  ಕೊಣಾಜೆ, ಜ.7: ಕೊಣಾಜೆ ಸಮೀಪದ ಗ್ರಾಮಚಾವಡಿ ಬಳಿಯ ಸಣ್ಣಪದವು ಎಂಬಲ್ಲಿ ಅಪಾಯಕಾರಿ ತಿರುವಿನಲ್ಲಿ ಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಚಾಲಕನ ನಿಯಂತ್ರಣ ತಪ್ಪಿಪಕ್ಕದ ವಿದ್ಯುತ್ ಕಂಬಕ್ಕೆ ಬಡಿದು ರಸ್ತೆಗೆ ಉರುಳಿ ಬಿದ್ದ ಘಟನೆ ಶನಿವಾರ ನಡೆದಿದೆ.

ಕಂಬಕ್ಕೆ ಲಾರಿ ಢಿಕ್ಕಿ ಹೊಡೆ ದಾಗಲೇ ಅದೃಷ್ಟವಶಾತ್ ವಿದ್ಯುತ್ ನಿಲುಗಡೆಯಾಗಿದ್ದರಿಂದ ದೊಡ್ಡ ಪ್ರಮಾಣದ ಅನಾಹುತ ತಪ್ಪಿದೆ. ವಿದ್ಯುತ್ ಕಂಬ ಉರುಳಿ ಬಿದ್ದುದರಿಂದ ಸಣ್ಣಪದವು ಮೂಲಕ ಸಂಚರಿಸುವ ವಾಹನಗಳು ಸುಮಾರು ಅರ್ಧಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತಿದ್ದವು. ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾನೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News