ಹಜ್ ಸಮಿತಿ ವೆಬ್‌ಸೈಟ್‌ಗೆ ಸೈಬರ್ ದಾಳಿ
Update: 2017-01-08 13:26 IST
ಕೊಂಡೊಟ್ಟಿ,ಜ.8: ಕೇರಳ ರಾಜ್ಯ ಹಜ್ ಸಮಿತಿ ವೆಬ್‌ಸೈಟ್‌ಗೆ ಸೈಬರ್ ದಾಳಿಯಾಗಿದೆ. ಶನಿವಾರ ರಾತ್ರೆ ವೆಬ್‌ಸೈಟ್ ಹ್ಯಾಕ್ ಆಗಿರುವುದು ಗಮನಕ್ಕೆ ಬಂದಿದೆ. ಈ ವರ್ಷದ ಹಜ್ ಯಾತ್ರೆಯ ಅರ್ಜಿಸ್ವೀಕಾರ ಕಾರ್ಯ ಚಾಲ್ತಿಯಲ್ಲಿರುವಂತೆ ಹಜ್‌ಸಮಿತಿ ವೆಬ್‌ಸೈಟ್ ಗೆ ಸೈಬರ್ ದಾಳಿಗೊಳಗಾಗಿದೆ. ವೆಬ್‌ಸೈಟ್‌ನ ಡಾಟ ನಾಶಪಡಿಸಿಲ್ಲ. ವೆಬ್ ಸೈಟ್‌ನ ಸುರಕ್ಷೆಯನ್ನು ಹೆಚ್ಚಿಸಲು ಕರೆ ನೀಡಿದ ದಾಳಿಕೋರರು ಪಾಕಿಸ್ತಾನ್ ಝಿಂದಾಬಾದ್ ಎಂದು ಬರೆದಿದ್ದಾರೆ. ಸೈಟ್‌ನ ಸುರಕ್ಷಿತತೆಯ ಕುರಿತು ಅರಿತುಕೊಳ್ಳಲು ದಾಳಿ ಮಾಡಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆಂದು ವರದಿ ತಿಳಿಸಿದೆ.