ಪ್ರಿಯಾಂಕಾ ಗಾಂಧಿ ಕುಟುಂಬದೊಂದಿಗೆ ಕೇರಳಕ್ಕೆ ಭೇಟಿ
Update: 2017-01-08 13:33 IST
ತಿರುವನಂತಪುರಂ,ಜ.8: ಪ್ರಿಯಾಂಕಾ ಗಾಂಧಿ ಕುಟುಂಬದೊಂದಿಗೆ ಖಾಸಗಿ ಭೇಟಿಗಾಗಿ ತಿರುವನಂತಪುರಂಗೆ ಬಂದಿದ್ದಾರೆ. ಶನಿವಾರ ಸಂಜೆ 5:50ಕ್ಕೆ ಮಾಲದ್ವೀಪದಿಂದ ಏರ್ ಇಂಡಿಯ ವಿಮಾನದಲ್ಲಿ ಪ್ರಿಯಾಂಕಾ ಗಾಂಧಿ ರೋಬರ್ಟ್ ಮತ್ತು ಇಬ್ಬರು ಮಕ್ಕಳು ತಿರುವನಂತಪುರಂನಲ್ಲಿ ಬಂದಿಳಿದಿದ್ದು, ಕೋವಳಂನ ಖಾಸಗಿ ಹೊಟೇಲ್‌ನಲ್ಲಿ ತಂಗಿದ್ದಾರೆ. ರವಿವಾರ ಬೆಳಗ್ಗೆ ಜೆಟ್ ಏರ್‌ವೇಸ್ ಮೂಲಕ ದಿಲ್ಲಿಗೆ ತೆರಳಲಿದ್ದಾರೆ. ಕೇರಳದ ಕಾಂಗ್ರೆಸ್ ನಾಯಕರಿಗೂತಿಳಿಸದೆ ಅವರು ಕುಟುಂಬದೊಂದಿಗೆ ಕೇರಳಕ್ಕೆ ಬಂದಿದ್ದಾರೆ.
ವಿಮಾನ ನಿಲ್ದಾಣ ಅಧಿಕಾರಿಗಳು ಶನಿವಾರ ಬೆಳಗ್ಗೆಯಿಂದಲೆ ವಿಮಾನ ನಿಲ್ದಣದಲ್ಲಿ ಹೆಚ್ಚಿನ ಭದ್ರತೆಯ ವ್ಯವಸ್ಥೆ ಮಾಡಿದ್ದರು ಎಂದು ವರದಿ ತಿಳಿಸಿದೆ.