ಈಗಲೂ ನಾನೇ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ: ಮುಲಾಯಂ ಸಿಂಗ್‌ ಯಾದವ್‌

Update: 2017-01-08 12:48 GMT

ಲಕ್ನೋ, ಜ.8: "ಈಗಲೂ ನಾನೇ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ. ಪಾರ್ಟಿಗೆ ಸಂಬಂಧಿತ ಬೇರೆಯವರ ಸಹಿಗಳೆಲ್ಲವೂ ಸಹ ನಕಲಿ " ಎಂದು ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್‌ ಯಾದವ್‌  ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯ ಮಂತ್ರಿ ಅಖಿಲೇಶ್‌ ಯಾದವ್‌ ಮತ್ತು ರಾಮ್ ಗೋಪಾಲ್‌ ವಿರುದ್ಧ ಮುಲಾಯಂ ಸಿಂಗ್‌ ಯಾದವ್‌ ಕಿಡಿ ಕಾರಿದ್ದಾರೆ.
"ರಾಮ್‌ ಗೋಪಾಲ್‌ಗೆ ಪಕ್ಷದ ರಾಷ್ಟ್ರೀಯ ಕಾರ‍್ಯಕಾರಿಣಿ ಸಭೆ ಕರೆಯುವ ಹಕ್ಕು ಇಲ್ಲ. ಅವರಿಗೆ ಯಾವುದೇ ಅಧಿಕಾರವೂ  ಇಲ್ಲ.ಅವರನ್ನು ಎಸ್ಪಿಯಿಂದ ಉಚ್ಛಾಟನೆ ಮಾಡಲಾಗಿದೆ.  ಶಿವಪಾಲ್‌ ಯಾದವ್ ಈಗಲೂ ಉತ್ತರ ಪ್ರದೇಶ ರಾಜ್ಯದ ಸಮಾಜವಾದಿ ಪಕ್ಷದ ಅಧ್ಯಕ್ಷರಾಗಿದ್ದಾರೆ" ಎಂದು ಮುಲಾಯಂ ಸಿಂಗ್‌ ಯಾದವ್‌ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News