ಜಯಾ ಸಾವಿನ ವರದಿ ನೀಡಲು ಅಪೋಲೊ ಆಸ್ಪತ್ರೆಗೆ ಮದ್ರಾಸ್ ಹೈಕೋರ್ಟ್ ಆದೇಶ
Update: 2017-01-09 13:35 IST
ಚೆನ್ನೈ, ಜ.9: ತಮಿಳುನಾಡಿನ ಮಾಜಿ ಮುಖ್ಯ ಮಂತ್ರಿ ಜಯಲಲಿತಾ ನಿಗೂಢ ಸಾವಿಗೆ ಸಂಬಂಧಿಸಿ ನಾಲ್ಕು ವಾರಗಳ ಒಳಗಾಗಿ ಮುಚ್ಚಿದ ಲಕೋಟೆಯಲ್ಲಿ ವರದಿ ನೀಡುವಂತೆ ಚೆನ್ನೈನ ಅಪೋಲೊ ಆಸ್ಪತ್ರೆಗೆ ಮದ್ರಾಸ್ ಹೈಕೋರ್ಟ್ ಇಂದು ಆದೇಶ ನೀಡಿದೆ.
ಎಐಎಡಿಎಂಕೆ ಕಾರ್ಯಕರ್ತ ಜೋಸೆಫ್ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಜಯಲಲಿತಾ ಅವರಿಗೆ ನೀಡಿರುವ ಚಿಕಿತ್ಸೆಯ ವಿವರ ನೀಡುವಂತೆ ತಿಳಿಸಿದೆ. ಇದೇ ವೇಳೆ ಕೇಂದ್ರ ಸರಕಾರಕ್ಕೂ ನೋಟಿಸ್ ಜಾರಿ ಮಾಡಿದೆ.
ಮುಂದಿನ ವಿಚಾರಣೆಯನ್ನು ಫೆ.೨೩ಕ್ಕೆ ನ್ಯಾಯಾಲಯ ಮುಂದೂಡಿದೆ.