ಕೇಂದ್ರ ಸರಕಾರದ ವಿರುದ್ಧ ಸಿಪಿಎಂ ನ ಪ್ರತಿಭಟನೆ ಅಪಹಾಸ್ಯಕರ: ಬಿಜೆಪಿ
ತಿರುವನಂತಪುರಂ,ಜ.9: ಕೇಂದ್ರ ಸರಕಾರ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದ ಸಿಪಿಎಂ ನಿಲುವನ್ನು ಅಪಹಾಸ್ಯಕರ ಎಂದು ಬಿಜೆಪಿ ಕೇರಳ ಘಟಕದ ಅಧ್ಯಕ್ಷ ಕುಮ್ಮನಂ ರಾಜಶೇಖರನ್ ಟೀಕಿಸಿದ್ದಾರೆ. ನೋಟು ಅಮಾನ್ಯ ಕ್ರಮ ವಿಫಲವಾಗಿದೆ ಎಂದು ಸಿಪಿಐಎಂ ಹೇಳುತ್ತಿದೆ. ಜೊತೆಗೆ ಬೃಹತ್ ಉದ್ದಿಮೆದಾರರಿಗೆ 11ಲಕ್ಷ ಕೋಟಿರೂಪಾಯಿ ಸಾಲಕೊಡಲು ಕೇಂದ್ರ ನಿರ್ಧರಿಸಿದೆ ಎಂದು ಅದು ಹೇಳುತ್ತಿದೆ. ಸಿಪಿಎಂ ಆಕ್ಷೇಪಗಳಿಗೆ ಯಾವ ಆಧಾರವಿದೆ ಎಂದು ಕುಮ್ಮನಂ ಪ್ರಶ್ನಿಸಿದರು.
ಪ್ರಗತಿಪರ ಪಕ್ಷ ಎನ್ನುವ ಸಿಪಿಎಂ ಎಲ್ಲ ಸಮಯದಲ್ಲಿಯೂ ಸುಧಾರಣಾ ಕಾರ್ಯವನ್ನು ವಿರೋಧಿಸಿಯೇ ಕೆಲಸ ಮಾಡಿದ ಇತಿಹಾಸ ಇದೆ. ನೋಟು ಅಮಾನ್ಯ ಕ್ರಮವನ್ನು ಈಗ ವಿರೋಧಿಸುವ ಸಿಪಿಐಎಂ ತಮ್ಮ ತಪ್ಪನ್ನು ತಿದ್ದಿಕೊಳ್ಳುವ ಕಾಲ ಬಹುಬೇಗನೆ ಬರಲಿದೆ.ಬಡವರಿಗೆ ಪಡಿತರ ಅಕ್ಕಿ ವಿತರಿಸಲಿಕ್ಕೂ ಆಗದ ಸರಕಾರ ಕೇರಳದಲ್ಲಿದೆ. ಐಎಎಸ್ ಅಧಿಕಾರಿಗಳು ಪ್ರತಿಭಟನೆ ನಡೆಸಬೇಕಾದ ಪರಿಸ್ಥಿತಿ ಕೇರಳದ ಹೊರತು ಇನ್ನೆಲ್ಲಾದರೂ ಸೃಷ್ಟಿಯಾಗಿದೆಯೇ ಎಂದು ಕುಮ್ಮನಂ ಪ್ರಶ್ನಿಸಿದ್ದಾರೆಂದು ವರದಿ ತಿಳಿಸಿದೆ.