ಗಣರಾಜ್ಯೋತ್ಸವ: ಪೂರ್ವಭಾವಿ ಸಭೆ

Update: 2017-01-09 18:37 GMT

ಉಡುಪಿ, ಜ.9: ಉಡುಪಿ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವವನ್ನು ಜ.26ರಂದು ವಿಜೃಂಭಣೆಯಿಂದ ಆಚರಿಸುವ ಕುರಿತ ಸಭೆಯು ಸೋಮವಾರ ಜಿಲ್ಲಾಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಜರಗಿತು.

 ಗಣರಾಜ್ಯೋತ್ಸವದ ಪಥಸಂಚಲನ ಇನ್ನಷ್ಟು ಆಕರ್ಷಣೀಯವಾಗಿಸಲು ಜಿಲ್ಲಾಕಾರಿ ಸಭೆಯಲ್ಲಿ ಸೂಚಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 4 ತಂಡಗಳು ಭಾಗವಹಿಸುವುದಾಗಿ ವಿದ್ಯಾಂಗ ಉಪನಿರ್ದೇಶಕ ದಿವಾಕರ ಶೆಟ್ಟಿ ಮಾಹಿತಿ ನೀಡಿದರು.

ವೇದಿಕೆ ಅಲಂಕಾರದ ಹೊಣೆಯನ್ನು ಪೌರಾಯುಕ್ತ ಮಂಜುನಾಥಯ್ಯರಿಗೆ ವಹಿಸಲಾಯಿತು. ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಭುವನೇಶ್ವರಿ ಆಲಂಕಾರಿಕ ಹೂಗಿಡಗಳನ್ನು ಒದಗಿಸುವುದಾಗಿ ತಿಳಿಸಿದರು.

ಆಹಾರದ ವ್ಯವಸ್ಥೆಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಯೋಗೇಶ್ವರ್‌ರಿಗೆ ವಹಿಸಲಾಯಿತು. ಇದೇ ಸಂದರ್ಭದಲ್ಲಿ ಅಸಾಧರಣ ಶೌರ್ಯ ಪ್ರಶಸ್ತಿ ವಿಜೇತ ಮಕ್ಕಳಿಗೆ ಪ್ರಶಸ್ತಿ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಗ್ರೇಸಿ ಗೊನ್ಸ್ವಾಲಿಸ್ ಹೇಳಿದರು.

ಎಲ್ಲ ಅಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಹಾಜರಾಗ ಬೇಕೆಂದು ಜಿಲ್ಲಾಕಾರಿ ಹೇಳಿದರು. ನಗರಾಭಿವೃದ್ಧಿ ಪ್ರಾಕಾರದ ಆಯುಕ್ತ ಜನಾರ್ದನ್, ಕೃಷಿ ಇಲಾಖೆ ಜಂಟಿ ಆಯುಕ್ತ ಚಂದ್ರಶೇಖರ್, ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್ ಮತ್ತಿತರರು ಉಪಸ್ಥಿತರಿದ್ದರು. ಅಪರ ಜಿಲ್ಲಾಕಾರಿ ಅನುರಾಧಾ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News