ಉಪ್ಪಿನಂಗಡಿ: ಇಂದ್ರಪ್ರಸ್ಥ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ

Update: 2017-01-09 18:44 GMT

ಉಪ್ಪಿನಂಗಡಿ, ಜ.9: ಸೈನ್ಸ್ ಸೊಸೈಟಿ ಆ್ ಇಂಡಿಯಾದ ವತಿಯಿಂದ ಗುಜರಾತಿನ ರಾಜ್‌ಕೋಟ್‌ನಲ್ಲಿರುವ ಕೆ.ಜಿ. ಡೊಲಕಿಯ ಸ್ಕೂಲ್‌ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಇನ್ಸೆಪ್‌ನಲ್ಲಿ (ಐಎನ್‌ಎಸ್‌ಇ್-ಇಂಡಿಯನ್ ಸೈನ್ಸ್ ಇಂಜಿನಿಯರಿಂಗ್ ೇರ್-17ರಲ್ಲಿ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳ ಪ್ರಾಜೆಕ್ಟ್‌ಗೆ ಸ್ವರ್ಣ ಪದಕ ಗಳಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದೆ.

ವಿಜೇತ ವಿದ್ಯಾರ್ಥಿಗಳಾದ ಎ.ಯು. ನಚಿಕೇತ್ ಕುಮಾರ್, ಯು.ಎಲ್. ಉದಯಕುಮಾರ್ ಹಾಗೂ ವಿನಯಾ ದಂಪತಿ ಪುತ್ರ ಮತ್ತು ಅಮನ್ ಕೆ.ಎ., ಅಬ್ದುಲ್ ಅಝೀಝ್ ಹಾಗೂ ರಹೀಮತ್ ಬೇಗಂ ದಂಪತಿ ಪುತ್ರ. ಅವರು ಪ್ರಯೋಗಬದ್ಧವಾಗಿ ಸಿದ್ಧಪಡಿಸಿದ ‘ಎ ನ್ಯಾಚುರಲ್ ನೋವೆಲ್ ಕ್ವಾಗುಲೇಟಿಂಗ್ ಏಜೆಂಟ್ ್ರಮ್ ಅವೆರೋ ಬಿಲಿಂಬಿ ಾರ್ ರಬ್ಬರ್ ಲೇಟೆಕ್ಸ್’ ಪ್ರಾಜೆಕ್ಟ್ ಚಿನ್ನದ ಪದಕ ಪಡೆದಿದ್ದಾರೆ. ಈ ಮೂಲಕ ಇವರು ಯುಎಸ್‌ಎನಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆದಿದ್ದಾರೆ. ಇಂದ್ರಪ್ರಸ್ಥ ವಿದ್ಯಾಲಯದ ಶಿಕ್ಷಕಿ ನಿಶಿತಾ ಮಾರ್ಗದರ್ಶನದಲ್ಲಿ ಈ ಪ್ರಾಜೆಕ್ಟನ್ನು ರೂಪಿಸಲಾಗಿದೆ.

 ರಾಷ್ಟ್ರಮಟ್ಟದ ಈ ಸ್ಪರ್ಧಾ ಕಣದಲ್ಲಿ ಭಾಗವಹಿಸಿದ ಇಂದ್ರಪ್ರಸ್ಥ ವಿದ್ಯಾಲಯದ ನಿಹಾಲ್ ನೂಜಿಬೈಲ್, ರವಿನಾರಾಯಣ ಹಾಗೂ ಪೂರ್ಣಿಮಾ ದಂಪತಿ ಪುತ್ರ. ನಿಹಾಲ್ ಪ್ರಯೋಗಬದ್ಧವಾಗಿ ಸಿದ್ದಪಡಿಸಿದ ‘ಎ ನೋವೆಲ್ ಮಲ್ಟಿ ಪರ್ಪಸ್ ಲೆಕ್ವೇರ್ ಾರ್ ರುಸ್ಟ್ ಫ್ರಿವೇನ್‌ಶನ್ ಆ್ಯಂಡ್ ವುಡ್ ಫ್ರಿಸರ್‌ವೇಶನ್ ಪ್ರಮ್ ಟೆಂಡರ್ ಆರ್ಕ್‌ನಟ್ ಎಕ್ಸ್‌ಟ್ರೆಕ್ಟ್ ’’ಗೆ ಕಂಚಿನ ಪದಕ ಪಡೆದಿದೆ. ನಿಹಾಲ್ ನೂಜಿಬೈಲ್ ಅವರು ಬದನಾಜೆ ಶಂಕರ್ ಭಟ್‌ರವರ ಮಾರ್ಗದರ್ಶನದಲ್ಲಿ ಈ ಪ್ರಾಜೆಕ್ಟ್ ಮಂಡಿಸಿದ್ದಾರೆ ಎಂದು ಪ್ರಾಂಶುಪಾಲರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News