×
Ad

ನೋಟು ರದ್ದತಿಗೆ ಶಿಫಾರಸ್ಸು ಮಾಡಿದ್ದು ಸರ್ಕಾರವೇ ? ಎಷ್ಟು ದಿನದಲ್ಲಿ ರಿಸರ್ವ್‌ ಬ್ಯಾಂಕ್‌ ಒಪ್ಪಿಗೆ ನೀಡಿತು ?

Update: 2017-01-10 15:26 IST

ಹೊಸದಿಲ್ಲಿ, ಜ.10: ನೋಟು ರದ್ದತಿಯ ಆದೇಶ ಜಾರಿಗೊಳ್ಳುವ  ಒಂದು ದಿನ ಮೊದಲು ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಸರಕಾರ ತನ್ನ ನಿರ್ಧಾರವನ್ನು ತಿಳಿಸಿತ್ತು ಎಂದು ಆರ್ ಬಿಐ ಸದನ ಸಮಿತಿಗೆ ಮಾಹಿತಿ ನೀಡಿದೆ.
ಎಂ. ವೀರಪ್ಪ ಮೊಯ್ಲಿ ನೇತೃತ್ವದ ಸಮಿತಿಗೆ ಡಿ.22ರಂದು ಆರ್ ಬಿ ಐ ಸಲ್ಲಿರುವ ಏಳು ಪುಟಗಳ ವರದಿಯಲ್ಲಿ ಸರಕಾರ ನೋಟು ರದ್ದತಿಯ ನಿರ್ಧಾರವನ್ನು ನ.7, 2016ರಂದು ತಿಳಿಸಿತ್ತು ಎಂದು ಹೇಳಿದೆ.
ಖೋಟಾ ನೋಟುಗಳ ಹಾವಳಿ, ಉಗ್ರಗಾಮಿಗಳಿಗೆ ಹಣ ಪೂರೈಕೆಯಾಗುತ್ತಿರುವುದು ಮತ್ತು ಕಪ್ಪು ಹಣವನ್ನು ತಡೆಯುವುದಕ್ಕಾಗಿ ಐನೂರು ಮತ್ತು ಸಾವಿರ ರೂ.ನೋಟು ರದ್ದತಿಗೆ ಸರಕಾರ ನ.7ರಂದು ಆರ್ ಬಿ ಐ ಗೆ ಸಲಹೆ ನೀಡಿತ್ತು, ಸರಕಾರ ಆದೇಶ ನೀಡಿದ ಮರುದಿನವೇ ಅಂದರೆ ನ.8ರಂದು ರಿಸರ್ವ್‌ ಬ್ಯಾಂಕ್‌ ಐನೂರು ಮತ್ತು ಸಾವಿರ ರೂ. ನೋಟು ನಿಷೇಧಿಸುವ ನಿರ್ಧಾರ ಕೈಗೊಂಡಿತ್ತು ಎಂದು ವರದಿಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News