15 ವರ್ಷಗಳಲ್ಲಿ ಹುಚ್ಚುನಾಯಿ ಕಡಿತದಿಂದ ದೇಶದಲ್ಲಿ ಎಷ್ಷು ಲಕ್ಷ ಸಾವು ಸಂಭವಿಸಿದೆ ?
ಕೊಚ್ಚಿನ್,ಜ.10: ಪ್ರಾಣಿ ಜನನ ನಿಯಂತ್ರಣ (ಎಬಿಸಿ) ಜಾರಿಗೆ ಬಂದ 15ವರ್ಷಗಳಲ್ಲಿ ದೇಶದಲ್ಲಿ ಮೂರು ಲಕ್ಷಮಂದಿ ಹುಚ್ಚುನಾಯಿಕಡಿತದಿಂದ ರ್ಯಾಬೀಸ್ ತಗಲಿ ಮೃತಪಟ್ಟಿದ್ದಾರೆ ಎಂದು ಕೊಚ್ಚೌಸೇಫ್ ಚಿಟ್ಟಿಲಪಳ್ಳಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆಂಟಿ ರ್ಯಾಬೀಸ್ ಮದ್ದಿಗಾಗಿ ಸರಕಾರ 42,000 ಕೋಟಿ ರೂಪಾಯಿಗೂ ಅಧಿಕ ವೆಚ್ಚ ಮಾಡಿದೆ. ಖಾಸಗಿ ಕ್ಷೇತ್ರದಲ್ಲಿ ಮಾರಲಾದ ರ್ಯಾಬೀಸ್ ವ್ಯಾಕ್ಸಿನ್ ಲೆಕ್ಕ ಮಾಡಿದರೆ ಸುಮಾರು 1,26,000 ಕೋಟಿ ರೂ ಪಾಯಿ ವೆಚ್ಚ ಆಗಿರಬಹುದು.ಜಸ್ಟಿಸ್ ಸಿರಿಜಗನ್ ಸಮಿತಿಯ ಮತ್ತು ಆರೋಗ್ಯ ಇಲಾಖೆಯ ಲೆಕ್ಕ ಪ್ರಕಾರ ಮೂರು ವರ್ಷದಲ್ಲಿ ಕೇರಳದಲ್ಲಿ ಬೀದಿನಾಯಿ ದಾಳಿಗೆ 3.94 ಮಂದಿ ತುತ್ತಾಗಿದ್ದಾರೆ.
2015-16 ಕಾಲಾವಧಿಯಲ್ಲಿ 1 ಲಕ್ಷ ಮಂದಿ ಬೀದಿ ನಾಯಿ ಕಡಿತಕ್ಕೊಳಗಾಗಿದ್ದಾರೆ. ನಾಲ್ಕುವರ್ಷಗಳಲ್ಲಿ ಹುಚ್ಚು ನಾಯಿಕಡಿತದಿಂದ 48 ಮಂದಿ ಕೇರಳದಲ್ಲಿ ಮೃತಪಟ್ಟಿದ್ದಾರೆ. ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಬಹಿರಂಗ ಹಿನ್ನೆಲೆಯಲ್ಲಿ ಮೇನಕಾ ಗಾಂಧಿ ರಾಜೀನಾಮೆ ಇತ್ತು ತನಿಖೆ ಎದುರಿಸಬೇಕೆಂದು ಕೊಚೌಸೇಫ್ ಆಗ್ರಹಿಸಿದರು ಎಂದು ವರದಿ ತಿಳಿಸಿದೆ.