ಸಂಘಪರಿವಾರದ ದಾಂಧಲೆಗೆ ಮುಖ್ಯಮಂತ್ರಿಯ ಮೌನ ಸಮ್ಮತಿ:ಯೂತ್ ಲೀಗ್
ಮಲಪ್ಪುರಂ,ಜ.10: ಚಿತ್ರನಿರ್ದೇಶಕ , ಚಲನಚಿತ್ರ ಅಕಾಡಮಿ ಅಧ್ಯಕ್ಷ ಕಮಲ್‌ರಿಗೆ ಭಯೋತ್ಪಾದಕ ಎನ್ನುವ ಮುದ್ರೆಯೊತ್ತಿದ್ವೇಷ ಪ್ರಚಾರ ನಡೆಸುತ್ತಿರುವ ಬಿಜೆಪಿಯ ಎ.ಎನ್, ರಾಧಾಕೃಷ್ಣನ್ ಮತ್ತು ಎಂಟಿ ರಮೇಶ್ ವಿರುದ್ಧ ಕೇಸುದಾಖಲಿಸಬೇಕೆಂದು ಯೂತ್ ಲೀಗ್ ಪ್ರಧಾನ ಕಾರ್ಯದರ್ಶಿ ಪಿ.ಕೆ. ಫಿರೋಝ್ ಹೇಳಿದ್ದಾರೆ. ಬಿಜೆಪಿ, ಯುವಮೋರ್ಚಾಗಳ ದೂರಿನಲ್ಲಿ ಮಾತ್ರ ಪೊಲೀಸರು ಕ್ರಮ ಜರಗಿಸುತ್ತಿದ್ದಾರೆ.
ಇದು ಕೇರಳ ಗೃಹಸಚಿವಾಲಯದ ನೀತಿಯ ಭಾಗವೇ ಎಂದು ಗೃಹಸಚಿವರೂ ಆಗಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ಪಷ್ಟಪಡಿಸಬೇಕು. ಅಲ್ಪಸಂಖ್ಯಾತರು, ದಲಿತ, ಆದಿವಾಸಿ ವಿಭಾಗಗಳ ವಿರುದ್ಧ ಅಕಾರಣವಾಗಿ ಯುಎಪಿಎ ಸಹಿತ ಕ್ರಮ ಸ್ವೀಕರಿಸುವ ಪೊಲೀಸ್ ಸಂಘಪರಿವಾರಿಗಳ ವಿರುದ್ಧ ಬೆರಳೆತ್ತುವುದಿಲ್ಲ. ಇದು ಮುಖ್ಯಮಂತ್ರಿ ಮತ್ತು ಕಮ್ಯುನಿಸ್ಟ್ ಪಾರ್ಟಿಯ ಮೌನಸಮ್ಮತಿಯಿಂದ ನಡೆಯುತ್ತಿದೆ ಎಂದು ಫಿರೋಝ್ ಆರೋಪಿಸಿದ್ದಾರೆ.
ಸಂಘಪರಿವಾರವನ್ನು ವಿರೋಧಿಸುವಲ್ಲಿ ಸಿಪಿಐಎಂ ದ್ವಂದ್ವ ನೀತಿ ಅನುಸರಿಸುತ್ತಿದೆ. ಬಿಜೆಪಿ ಪರ ನಿಲುವು ಹೊಂದಿರುವ ಪ್ರಕಾಶ್ ಕಾರಟ್‌ರನ್ನು ಬೆಂಬಲಿಸುವ ಒಂದು ವಿಭಾಗ ಕೇರಳದ ಕಮ್ಯುನಿಸ್ಟ್ ಪಾರ್ಟಿಯಲ್ಲಿದ್ದಾರೆ ಎಂಬ ಸಂಶಯವಿದೆ. ಸಿಪಿಎಂ ಮತ್ತು ಸರಕಾರದ ನೀತಿಯ ವಿರುದ್ಧ ಸಿಪಿಐ ಸಹಿತ ಆಡಳಿತ ಪಾಲುದಾರ ಪಕ್ಷಗಳು ಪ್ರತಿಕ್ರಿಯಿಸುತ್ತಿರುವುದು ಈ ಸಂಶಯಕ್ಕೆ ಆಧಾರವಾಗಿದೆ ಎಂದು ಫಿರೋಝ್ ಸ್ಪಷ್ಟಪಡಿಸಿದರು.
ರಾಧಕೃಷ್ಣನ್‌ರನ್ನು ಜೈಲಿಗಟ್ಟಬೇಕು: ಯೂತ್ ಕಾಂಗ್ರೆಸ್ ಕೊಚ್ಚಿನ್ ಜ.10: ಚಿತ್ರ ನಿರ್ದೇಶಕ ಕಮಲ್ ದೇಶ ತೊರೆಯುವುದು ಉತ್ತಮ ಎಂದು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿಸುವ ಮೂಲಕ ಬಿಜೆಪಿಯ ಎ.ಎನ್, ರಾಧಕೃಷ್ಣನ್, ಸಾಕ್ಷಿ ಮಹಾರಾಜ್, ಮತ್ತು ಸಾಧ್ವಿ ಪ್ರಾಚಿಯ ರೀತಿಯಲ್ಲಿ ಕೋಮು ಧ್ರುವೀಕರಣಕ್ಕೆ ಕರೆ ನೀಡಿದ್ದಾರೆ ಎಂದು ಯೂತ್ ಕಾಂಗ್ರೆಸ್ ಆರೋಪಿಸಿದೆ.ರಾಧಾಕೃಷ್ಣನ್ ವಿರುದ್ಧ ಕಾನೂನು ಕ್ರಮ ಕೈಗೊಂಡು ಜೈಲಿಗಟ್ಟಬೇಕು. ಅಸಹಿಷ್ಣುತೆಯ ಉತ್ತರಭಾರತ ರಾಜಕೀಯ ಕೇರಳದಲ್ಲಿ ನಡೆಯಲಾರದು ಅವರು ಮನಗಾಣಬೇಕಿದೆ ಎಂದು ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡೀನ್ ಕುರ್ಯಕೋಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆಎಂದು ವರದಿಯಾಗಿದೆ.