‘ಯಾಹೂ’ ಇನ್ನು ‘ಅಲ್ಟಾಬ ಇಂಕ್’
ನ್ಯೂಯಾರ್ಕ್, ಜ. 10: ಒಂದು ಕಾಲದ ಇಂಟರ್‌ನೆಟ್ ದೈತ್ಯ ‘ಯಾಹೂ’ ತನ್ನ ಹೆಸರನ್ನು ‘ಅಲ್ಟಾಬ ಇಂಕ್’ ಎಂಬುದಾಗಿ ಬದಲಿಸಿಕೊಳ್ಳಲಿದೆ ಹಾಗೂ ವೆರಿರೆನ್ ಕಮ್ಯುನಿಕೇಶನ್ಸ್ ಜೊತೆಗಿನ ಒಪ್ಪಂದ ಮುಗಿದ ಬಳಿಕ ಅದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮರಿಸಾ ಮಯ್ಯರ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ.
ಡಿಜಿಟಲ್ ಜಾಹೀರಾತು, ಇಮೇಲ್ ಮತ್ತು ಮಾಧ್ಯಮ ಸೊತ್ತುಗಳು ಸೇರಿದಂತೆ ಯಾಹೂ ಇಂಕ್‌ನ ಪ್ರಮುಖ ಇಂಟರ್‌ನೆಟ್ ವ್ಯವಹಾರವನ್ನು ವೆರಿಝಾನ್‌ಗೆ 4.83 ಬಿಲಿಯನ್ ಡಾಲರ್ (32,936 ಕೋಟಿ ರೂಪಾಯಿ)ಗೆ ಮಾರಾಟ ಮಾಡುವ ಒಪ್ಪಂದವೊಂದು ತಯಾರಾಗುತ್ತಿದೆ.
ತನ್ನ ಇಮೇಲ್ ಖಾತೆಗಳ ಮೇಲೆ ಎರಡು ಬಾರಿ ಕನ್ನ ಹಾಕಲಾಗಿದೆ ಎಂಬುದಾಗಿ ಯಾಹೂ ಕಳೆದ ವರ್ಷ ಬಹಿರಂಗಪಡಿಸಿದ ಬಳಿಕ, ಈ ಒಪ್ಪಂದದ ಶರತ್ತುಗಳು ಬದಲಾಗಬಹುದಾಗಿದೆ ಹಾಗೂ ಒಪ್ಪಂದವೇ ರದ್ದುಗೊಳ್ಳಬಹುದಾಗಿದೆ.ಒಪ್ಪಂದ ಅಂತಿಮಗೊಂಡ ಬಳಿಕ ಇನ್ನೂ ಐವರು ಯಾಹೂ ನಿರ್ದೇಶಕರು ರಾಜೀನಾಮೆ ನೀಡಲಿದ್ದಾರೆ.ಉಳಿದ ನಿರ್ದೇಶಕರು ಅಲ್ಟಾಬವನ್ನು ನಡೆಸಲಿದ್ದಾರೆ.
ಯಾಹೂ ಆಸ್ತಿಯ 15 ಶೇಕಡವನ್ನು ಚೀನಾದ ಇ-ಕಾಮರ್ಸ್ ಕಂಪೆನಿ ಅಲಿಬಾಬ ಗ್ರೂಪ್‌ನಲ್ಲಿ ಹೂಡಲಾಗಿದೆ ಹಾಗು 35.5 ಶೇಕಡ ಯಾಹೂ ಜಪಾನ್‌ನಲ್ಲಿದೆ.