×
Ad

ಫಿಲಿಪ್ಪೀನ್ಸ್ ಸಮುದ್ರದಲ್ಲಿ ಪ್ರಬಲ ಭೂಕಂಪ: ಸುನಾಮಿಯಿಲ್ಲ

Update: 2017-01-10 20:15 IST

ಮನಿಲ, ಜ. 10: ದಕ್ಷಿಣ ಫಿಲಿಪ್ಪೀನ್ಸ್‌ನ ಸೆಲೆಬಸ್ ಸಮುದ್ರದಲ್ಲಿ ಮಂಗಳವಾರ ರಿಕ್ಟರ್ ಮಾಪಕದಲ್ಲಿ 7.2ರ ತೀವ್ರತೆಯ ಭೂಕಂಪ ಸಂಭವಿಸಿದೆ. ಆದರೆ, ಭೂಕಂಪವು ಭೂಮಿಯ ಅತ್ಯಂತ ಆಳದಲ್ಲಿ ಸಂಭವಿಸಿರುವುದರಿಂದ ಯಾವುದೇ ಹಾನಿ ಸಂಭವಿಸಿದಲ್ಲ ಹಾಗೂ ಸುನಾಮಿ ಸೃಷ್ಟಿಯಾಗಿಲ್ಲ.

ಸಮುದ್ರ ತಳದಿಂದ 625 ಕಿಲೋಮೀಟರ್ ಆಳದಲ್ಲಿ ಸಾಗರ ತಟ್ಟೆಗಳ ಚಲನೆಯಿಂದಾಗಿ ಭೂಕಂಪ ಸಂಭವಿಸಿದೆ ಹಾಗೂ ಅದು ದಕ್ಷಿಣದ ಜನರಲ್ ಸ್ಯಾಂಟೋಸ್ ನಗರದಲ್ಲಿ ಲಘುವಾಗಿ ಅನುಭವಕ್ಕೆ ಬಂದಿದೆ ಎಂದು ಫಿಲಿಪ್ಪೀನ್ಸ್ ಭೂಗರ್ಭ ಅಧ್ಯಯನ ಸಂಸ್ಥೆಯ ಅಧಿಕಾರಿ ರೆನಾಟೊ ಸೋಲಿಡಮ್ ಹೇಳಿದರು.

1990ರಲ್ಲಿ ಉತ್ತರದ ದ್ವೀಪ ಲೂಝನ್‌ನಲ್ಲಿ ಸಂಭವಿಸಿದ 7.7ರ ತೀವ್ರತೆಯ ಭೂಕಂಪದಲ್ಲಿ ಸುಮಾರು 2,000 ಮಂದಿ ಪ್ರಾಣ ಕಳೆದುಕೊಂಡಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News