×
Ad

ಶೀಘ್ರ ಒಪ್ಪಂದಕ್ಕೆ ಅಮೆರಿಕ, ಕ್ಯೂಬ ಮುಂದು : ಟ್ರಂಪ್ ಬೆದರಿಕೆ !

Update: 2017-01-10 20:32 IST

ಹವಾನ, ಜ. 10: ಮೆಕ್ಸಿಕೊ ಕೊಲ್ಲಿಯಲ್ಲಿ ತೈಲ ಸೋರಿಕೆಯನ್ನು ಜಂಟಿಯಾಗಿ ತಡೆಗಟ್ಟಲು ಮತ್ತು ಶುಚಿಗೊಳಿಸಲು ಕ್ಯೂಬ ಮತ್ತು ಅಮೆರಿಕಗಳು ಸೋಮವಾರ ಒಪ್ಪಿಕೊಂಡಿವೆ.

ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸುವ ಮುನ್ನ ಒಪ್ಪಂದಗಳನ್ನು ಅಂತಿಮಗೊಳಿಸಲು ಈ ದೇಶಗಳು ನಿರ್ಧರಿಸಿವೆ.

145 ಕಿಲೋಮೀಟರ್ ಅಂತರದಿಂದ ಬೇರ್ಪಟ್ಟಿರುವ ನೆರೆಯ ದೇಶಗಳ ಜಂಟಿ ಸಾಗರ ಪರಿಸರವನ್ನು ಸಂರಕ್ಷಿಸಲು ಹಲವಾರು ಒಪ್ಪಂದಗಳನ್ನು ನಡೆಸಲಾಗುತ್ತಿದೆ ಎಂದು ಅಮೆರಿಕದ ಚಾರ್ಜ್ ಡಿ ಅಫೇರ್ಸ್‌ ಜೆಫ್ರಿ ಡಿಲಾರೆಂಟಿಸ್ ತಿಳಿಸಿದರು.

ಕ್ಯೂಬ ಇನ್ನಷ್ಟು ರಾಜಕೀಯ ಮತ್ತು ಆರ್ಥಿಕ ವಿನಾಯಿತಿಗಳನ್ನು ನೀಡದಿದ್ದರೆ ಎರಡು ದೇಶಗಳ ನಡುವೆ ರೂಪುಗೊಳ್ಳುತ್ತಿರುವ ಒಪ್ಪಂದಗಳನ್ನು ರದ್ದುಪಡಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News