×
Ad

ವೈರಲ್ ವೀಡಿಯೋದ ಯೋಧ ತೇಜ್ ಸುರಕ್ಷತೆ ಬಗ್ಗೆ ಪತ್ನಿ ಕಳವಳ

Update: 2017-01-10 21:30 IST

ವಿವಾದಿತ ವಿಡಿಯೋ ಪ್ರಸಾರವಾದ ಸೋಮವಾರ ಸಂಜೆಯಿಂದ ತನ್ನ ಪತಿಯನ್ನು ಸಂಪರ್ಕಿಸಲು ತನಗೆ ಸಾಧ್ಯವಾಗಿಲ್ಲವೆಂದು ಬಿಎಸ್‌ಎಫ್ ಯೋಧ ತೇಜ್‌ಬಹಾದ್ದೂರ್ ಯಾದವ್‌ನ ಪತ್ನಿ ದೂರಿದ್ದಾರೆ. ಈ ಬಗ್ಗೆ ತೇಜ್‌ಬಹಾದ್ದೂರ್ ಅವರ ಫೇಸ್‌ಬುಕ್ ಪುಟವನ್ನೇ ಬಳಸಿಕೊಂಡಿರುವ ಆಕೆ, ತನ್ನ ಪತಿಯ ಸುರಕ್ಷತೆಯ ಬಗ್ಗೆ ತಾನು ಆತಂಕಗೊಂಡಿರುವುದಾಗಿ ಹೇಳಿದ್ದಾರೆ.

  ಈ ಮಧ್ಯೆ ಸೋಮವಾರ ನಡೆದ ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ ತೇಜ್‌ಯಾದವ್ ಅವರು ಅರೆಸೈನಿಕ ಪಡೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ತಾಂಡವವಾಡುತ್ತಿದೆಯೆಂದು ದೂರಿದ್ದರು.

  ಈ ಮಧ್ಯೆ ವಿವಾದಿತ ವಿಡಿಯೋದಿಂದಾಗಿ ಬಿಎಸ್‌ಎಫ್ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿರುವ ತೇಜ್ ಯಾದವ್‌ನನ್ನು ಪೂಂಚ್‌ನಲ್ಲಿರುವ ಬಿಎಸ್‌ಎಫ್‌ನ 29ನೆ ಯೂನಿಟ್‌ಗೆ ವರ್ಗಾಯಿಸಲಾಗಿದ್ದು, ಅಲ್ಲಿ ಅವರನ್ನು ಪ್ಲಂಬರ್ ಕೆಲಸಕ್ಕೆ ನಿಯೋಜಿಸಲಾಗಿದೆಯೆಂದು ಕೆಲವು ಮೂಲಗಳು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News